ಕೇರ್ಪಡ : ಯಕ್ಷಗಾನ ರಂಗಪ್ರವೇಶ ಮತ್ತು ಪ್ರದರ್ಶನ

0

ಕೇರ್ಪಡ ಶ್ರೀ ಮಹಿಷಮರ್ದಿನಿ ಯಕ್ಷಗಾನ ಕಲಾಕೇಂದ್ರ ಇದರ ವತಿಯಿಂದ ಎ.26 ರಂದು ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ 2 ನೇ ವರ್ಷದ ಯಕ್ಷಗಾನ ರಂಗಪ್ರವೇಶ ಮತ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ನಡೆದ ಸಭಾಕಾರ್ಯಕ್ರಮವನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ವಸಂತ ನಡುಬೈಲು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಲಾಕೇಂದ್ರದ ಅಧ್ಯಕ್ಷ ಅವಿನಾಶ್ ದೇವರಮಜಲು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಕೆ. ಹೇಮಳ, ಕಲಾ ಕೇಂದ್ರದ ಸಂಚಾಲಕ ಪ್ರದೀಪ್ ಎಣ್ಮೂರು, ಯಕ್ಷಗಾನ ಗುರು ಯಕ್ಷಮಣಿ ಗಿರೀಶ್ ಗಡಿಕಲ್ಲು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಳೆದ ಒಂದು ವರ್ಷದಿಂದ ಅಭ್ಯಾಸ ತರಗತಿಗೆ ಪೂರ್ಣ ಹಾಜರಾತಿಯನ್ನು ಪಡೆದುಕೊಂಡ ಕು | ನಂದನ್ ದೇವರಮಜಲು, ಕು | ಚೇತನ್ ಡೆಕ್ಕಳ, ಕು | ವಿಪ್ರಾ ನಾವೂರು, ಕು | ಬೃಂದಾ ಕರಂಬಿಲ ಇವರನ್ನು ಗುರುತಿಸಲಾಯಿತು.


ಅಲ್ಲದೆ ಕಳೆದ ಎರಡು ವರ್ಷಗಳಿಂದ ತರಗತಿಗೆ ಪೂರ್ಣ ಹಾಜರಾತಿ ಮತ್ತು ಸತತ ಅಭ್ಯಾಸವನ್ನು ಮಾಡಿ, ಗುರುಗಳ ಮೆಚ್ಚುಗೆಗೆ ಪಾತ್ರರಾದ ನಿನಾದ್ ದೇವರಮಜಲು ಇವರಿಗೆ ಗುರುಗಳಾದ ಯಕ್ಷಮಣಿ ಗಿರೀಶ್ ಗಡಿಕಲ್ಲು ಇವರು ಪ್ರಪ್ರಥಮ ಬಾರಿಗೆ ಯಕ್ಷಮಣಿ ಪುರಸ್ಕಾರವನ್ನು ನೀಡಿ ಗೌರವಿಸಿದರು.


ಪೋಷಕರಾದ ಶ್ರೀಮತಿ ಭವ್ಯ ಮತ್ತು ಶ್ರೀಮತಿ ರಶ್ಮಿ ನಿರೂಪಿಸಿದರು. ಶ್ರೀಮತಿ ಹರ್ಷಿತಾ ಅಲೆಕ್ಕಾಡಿ ಸ್ವಾಗತಿಸಿ, ಶ್ರೀಮತಿ ಮಧು ಯತೀಶ್ ವಂದಿಸಿದರು. ಕು | ರಚನಾ ಚಿದ್ಗಲ್ ಪ್ರಾರ್ಥಿಸಿದರು.

ಯಕ್ಷಮಣಿ ಗಿರೀಶ್ ಗಡಿಕಲ್ಲು ಇವರ ನಿರ್ದೇಶನದಲ್ಲಿ ಭಕ್ತ ಪ್ರಹಲ್ಲಾದ, ಪ್ರಚಂಡ ಭಾರ್ಗವ ಮತ್ತು ಕುಶ – ಲವ ಪ್ರದರ್ಶನ ಮೂಡಿಬಂದಿತು. ಹಿಮ್ಮೇಳದಲ್ಲಿ ಶಶಾಂಕ್ ಎಲಿಮಲೆ, ಕು | ರಚನಾ ಚಿದ್ಗಲ್, ಮೋಹನ ಗೌಡ ಕಂಚಿಕಾರಗದ್ದೆ, ಲಕ್ಷ್ಮೀಶ ಶಗ್ರಿತ್ತಾಯ, ದರ್ಶನ್ ಸಹಕರಿಸಿದರು. ವರದಿ : ಸಂಕಪ್ಪ ಸಾಲ್ಯಾನ್