ಹಳೆಗೇಟು : ಅಡ್ಕ ಸಮೀಪ ಮುಖ್ಯರಸ್ತೆಯಲ್ಲಿ ನೀರಿನ ಪೈಪ್ ಒಡೆದು ಬೃಹತ್ ನೀರು ಪೋಲು

0

ಸುಳ್ಯದ ಹಳೆಗೇಟು ಅಡ್ಕ ಸಮೀಪದ ಮುಖ್ಯ ರಸ್ತೆಯಲ್ಲಿ ನಗರ ಪಂಚಾಯತ್ ಕುಡಿಯುವ ನೀರು ಸಂಪರ್ಕದ ಮುಖ್ಯ ಪೈಪ್ ಒಡೆದು ನೀರು ಪೋಲಾಗುತ್ತಿದೆ.
ನಿನ್ನೆ ಸಂಜೆಯಿಂದ ನೀರು ಈ ರೀತಿ ಪೋಲ್ ಆಗುತ್ತಿದ್ದು ಸಂಬಂಧಪಟ್ಟ ಇಲಾಖೆಯವರು ಯಾರು ಇತ್ತ ಗಮನ ಹರಿಸಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈಗಾಗಲೇ ನಗರ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು ಒಂದೊಂದು ಹನಿ ನೀರಿಗೂ ಸಂರಕ್ಷಿಸುವ ಸಂದರ್ಭ ಇದಾಗಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಬೇಕಾಗಿದೆ.