ಸಾಮಾಜಿಕ ಧುರೀಣ, ಪ್ರಗತಿಪರ ಕೃಷಿಕ ಕಾನಾವು ಗೋಪಾಲಕೃಷ್ಣ ಭಟ್‌ರವರ ವೈಕುಂಠ ಸಮಾರಾಧನೆ ಕಾರ್ಯಕ್ರಮ ಹಾಗೂ ನುಡಿನಮನ

0

ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿದ ಪ್ರಗತಿಪರ ಕೃಷಿಕ, ಪೆರುವಾಜೆ ಗ್ರಾಮದ ದಿ|ಗೋಪಾಲಕೃಷ್ಣ ಭಟ್ ಕಾನಾವು ರವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯಕ್ರಮ ಹಾಗೂ ವೈಕುಂಠ ಸಮಾರಾಧನೆ ಮತ್ತು ನುಡಿನಮನ ಕಾರ್ಯಕ್ರಮ ಎ.೨೭, ೨೮, ೨೯, ಮತ್ತು ೩೦ ರಂದು ಪೆರುವಾಜೆ ಕಾನಾವು ಮನೆಯಲ್ಲಿ ನಡೆಯಿತು.

ಮಳವಳಿಕೆ ಗೋಪಾಲಕೃಷ್ಣ ಭಟ್ ರವರು ದಿ|ಗೋಪಾಲಕೃಷ್ಣ ಭಟ್ ಕಾನಾವು ರವರ ಸರಳ ವ್ಯಕ್ತಿತ್ವ, ಸ್ನೇಹಮಯಿ ಜೀವನ, ಪರೋಪಕಾರಿ ಮೃದು ಸ್ವಭಾವದಿಂದ ನಿಸ್ವಾರ್ಥ ಬದುಕಿನ ಕುರಿತು ಮಾತನಾಡಿ ನುಡಿನಮನ ಸಲ್ಲಿಸಿದರು.

ಡಾ.ವೆಂಕಟರಮಣ ಭಟ್‌ವರು ಅವರ ಜೀವನಮತ್ತು ಅವರ ಸಹೋದರರ ನಡುವಿನ ಬಾಂದವ್ಯದ ಅವರು ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ಗುಣಗಾನ ಮಾಡಿದರು.

ರತ್ನಾವತಿ,ಉಷಾ ,ಪ್ರೇಮ ಭಟ್ ಮಳವಳಿಕೆ ಭಟ್ ಸಹೋದರಿಯರು ಕವನ ಹಾಡಿದರು.
ಮೊಮ್ಮಕ್ಕಳಾದ ಸಿಂಚನ ಸರಸ್ವತಿ, ಶರ್ಮಿಲಿ ಶಂಕರಿ ಅಜ್ಜನೊಂದಿಗಿನ ಒಡನಾಟದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.

ದಿ|ಗೋಪಾಲಕೃಷ್ಣ ಭಟ್ ಕಾನಾವು ರವರ ಹಿತೈಷಿಗಳು,ಬಂದು ಮಿತ್ರರು, ಕುಟುಂಬದ ಸದಸ್ಯರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಪತ್ನಿ ಶ್ರೀಮತಿ ಶಂಕರಿ , ಮಗ ಡಾ.ನರಸಿಂಹ ಶರ್ಮ, ಮಗಳು ಡಾ.ವಿದ್ಯಾಶಾರದಾ, ಅಳಿಯ ಡಾ.ಶ್ರೀಕೃಷ್ಣ ಭಟ್,ಸೊಸೆ ಶ್ರೀ ಮತಿ ಸೌಮ್ಯಲಕ್ಷ್ಮಿ,ಮೊಮ್ಮಕ್ಕಳು ಹಾಗೂ ಕುಟುಂಬದವರು ಕಾರ್ಯಕ್ರಮಕ್ಕೆ ಅಗಮಿಸಿದ ಸರ್ವರನ್ನೂ ಪ್ರೀತಿಯಿಂದ ಬರಮಾಡಿಕೊಂಡರು.

ಗಣಪಯ್ಯ ಭಟ್, ಡಾ.ಶ್ರೀಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.