ಮೂಲಭೂತ ಸೌಕರ್ಯಗಳ ಅಭಿವೃದ್ಧಿಯೇ ಜನ ಸಾಮಾನ್ಯರಿಗೆ ಬೇಕಾಗಿದ್ದು : ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ

0

ನಮ್ಮ ರಾಜ್ಯದ ಚುನಾವಣಾ ಸಂದಂರ್ಭವಿದು ಮತದಾನ ನಮ್ಮೆಲ್ಲರ ಹಕ್ಕು ಜಾತ್ಯಾತೀತ ಸ್ವಭಾವವುಳ್ಳ, ಜನಪರ ಕಾಳಜಿಯುಳ್ಳ, ನಾಡಿನ ಕ್ಷೇಮಕ್ಕಾಗಿ ದುಡಿಯುವ ಸಮರ್ಥರೆನಿಸಿದ ಓರ್ವ ಅಭ್ಯರ್ಥಿಗೆ ಮತವನ್ನು ದಾನವಾಗಿ ನೀಡಬೇಕು. ಕೇವಲ ಚುನಾವಣಾ ಸಂದರ್ಭದ ಭರವಸೆಗಳ ಅಥವಾ ತಾತ್ಕಾಲಿಕ ಸುಖಗಳ ಮಾರು ಹೋಗದೇ ಇರುವುದು ಉತ್ತಮ. ಇದೀಗ ಮತಯಾಚನೆಗಾಗಿ ಮನೆ ಮನೆ ಸುತ್ತಾಡುವವರು ಚುನಾವಣಾ ಬಳಿಕ ಒಂದು ವಾರ್ಡ್ ಗಾದರೂ ಭೇಟಿ ಯಾಗಿ ಅಲ್ಲಿಯ ಸಮಸ್ಯೆ ಮತ್ತು ಅಹವಾಲುಗಳನ್ನು ಆಲಿಸಿ ಪರಿಹಾರ ಮಾಡುವ ಅಭ್ಯರ್ಥಿಯಾಗಿದ್ದಲ್ಲಿ ಅಂತಹವರನ್ನು ಆಯ್ಕೆ ಗೊಳಿಸಲು ಜನರೇ ಮುಂದೆಬರುತ್ತಾರೆ . ಸಧ್ಯದ ಪರಿಸ್ಥಿತಿ ತದ್ವಿರುದ್ಧ ತಾನೇ ?
ಚುನಾವಣಾ ಪ್ರಚಾರಕ್ಕಾಗಿ ರಾಷ್ಟ್ರ, ರಾಜ್ಯ ನಾಯಕರುಗಳು ಆಗಮಿಸಿ ಭರವಸೆಗಳ ಸುರಿಮಳೆಗೈದು ತೆರಳುತ್ತಾರೆ. ಆದರೆ ಪ್ರಸ್ತುತ ಊರಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹೇಗಿದೆ ? ಮುಂದೇನಾಗಬೇಕು ? ಕುಂದು ಕೊರತೆಗಳ ಬಗ್ಗೆ ಪಟ್ಟಿ ಮಾಡಿ ಆ ಬಗ್ಗೆ ಗಮನ ಹರಿಸಿದರೆ ನಾಡಿನ ಸರ್ವತೋಮುಖ ಅಭಿವೃದ್ಧಿಯಾಗಬಹುದಿತ್ತು. ನಮ್ಮ ನಾಡು ಅಭಿವೃದ್ಧಿ ಪಥದಲ್ಲಿದೆಯಾದರೂ ಜನ ಸಂಖ್ಯಾಕ್ಕನುಗುಣವಾಗಿ, ಮತ್ತು ಆಧುನಿಕ ಯುಗಕ್ಕನುಸಾರವಾಗಿ ಬಹಳಷ್ಟು ಅಭಿವೃದ್ಧಿಹೊಂದ ಬೇಕೆಂಬುದರಲ್ಲಿ ಎರಡು ಮಾತಿಲ್ಲ.ಮನುಷ್ಯನಿಗೆ ಬೇಕಿರುವುದು ಆರೋಗ್ಯ ಮತ್ತು ನೆಮ್ಮದಿ ಪೂರ್ಣ ಬದುಕು.
ಇವೆರಡೂ ಪ್ರಸಕ್ತ ಸನ್ನಿವೇಶದಲ್ಲಿ ಕಷ್ಟಕರವಾಗುತ್ತಿದೆ.
ನಿತ್ಯೋಪಯೋಗಿ ವಸ್ತುಗಳ,ಅಗತ್ಯ ಸಾಮಗ್ರಿಗಳ ಬೆಲೆಯೂ ದೈನಂದಿನ ಹೆಚ್ಚುತ್ತಿದೆ,ಶಿಕ್ಷಣ ಮತ್ತು ಆರೋಗ್ಯ ಮಾರ್ಕೆಟ್ ವಸ್ತುವಾಗಿ ಮಾರ್ಪಾಡಾಗುತ್ತಿದೆ
ಇಂತಹ ಅಸಂಖ್ಯ ಸಮಸ್ಯೆಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ದುಷ್ಕರವಾಗುತ್ತಿದೆ. ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಸರಕಾರಗಳ ಗಮನ ಸೆಳೆದು ಯಶಸ್ವಿಯಾದರೆ ಜನ ಸಾಮಾನ್ಯರು ನೀಡಿದ ಮತಕ್ಕೊಂದು ಪ್ರತ್ಯುಪಕಾರ ವಾಗಬಹುದು. ಸರಕಾರಿ ಶಾಲೆಗಳು , ಆಸ್ಪತ್ರೆಗಳು ಮೇಲ್ದರ್ಜೆಗೆ ಏರಿಸಿ ಜನಾಕರ್ಷಣೀಯವಾಗಬೇಕು. ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯಿಂದಾಗಿ ಅದೆಷ್ಟೋ ಬಡ ಕುಟುಂಬದವರು ಪ್ರೈವೇಟ್ ಆಸ್ಪತ್ರೆಯ ಮೊರೆ ಹೋಗಿ ಚಿಕಿತ್ಸೆ ಪಡೆದು ಕೈ ಸುಟ್ಟು ಕೊಳ್ಳುವ ದುಸ್ಥಿತಿಯಾಗುತ್ತಿದೆ.ಸುಳ್ಯದ ತಾಲೂಕು ಆಸ್ಪತ್ರೆಯ ಕೊರತೆಗಳು ಬಹಳಷ್ಟಿವೆ. ಇದೊಂದು ಉದಾಹರಣೆಗೆ ತೆಗೆದು ಕೊಂಡಿದ್ದು ವಿವರಣೆಗೆ ಅನೇಕಾರು ವಿಷಯಗಳಿವೆ
ಸರಕಾರಿ ಸವಲತ್ತುಗಳು ಪಡೆಕೊಳ್ಳುವುದು ಬಿಡಿ ಆ ಬಗ್ಗೆ ಮಾಹಿತಿ ದೊರೆಯದ ಜನರೆಷ್ಟಿವೆ.
ಪ್ರತಿಯೊಬ್ಬ ಪ್ರಜೆಯೂ ತೆರಿಗೆ ಪಾವತಿಸಿ ನಿಯಮ ನಿಬಂಧನೆ ಪಾಲಿಸಿ ಬದುಕು ಸಾಗಿಸುವಾಗ ಅವನಿಗೆ ದೊರಕಬೇಕಾದದ್ದು ದೊರಕಿಸುವುದು ಚುನಾಯಿತ ಪ್ರತಿನಿಧಿಗಳ ಕರ್ತವ್ಯವಲ್ಲವೇ
ಈ ನಿಟ್ಟಿನಲ್ಲಿ ಈ ಸಾಲಿನ ಚುನಾವಣೆ ಆತ್ಮ ವಿಮರ್ಶೆಗೆ ದಾರಿಯಾಗಿ ಆ ಮೂಲಕ ನಾಡಿನ ಅಭಿವೃದ್ಧಿಯಾಗಲಿ.