ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಭಜರಂಗ ದಳ ನಿಷೇಧ ಪ್ರಸ್ತಾವಕ್ಕೆ ಸುಳ್ಯ ಬಿಜೆಪಿ ಯುವಮೋರ್ಚಾ ಖಂಡನೆ

0

ಕಾಂಗ್ರೆಸ್ ನಿನ್ನೆ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧ ಮಾಡುವುದಾಗಿ ಘೋಷಿಸಿದ್ದು, ಇದರಿಂದ ಕಾಂಗ್ರೆಸ್ ನ ಹಿಂದೂ ವಿರೋಧಿ ಮುಖ ಸ್ಪಷ್ಟವಾಗಿ ಅನಾವರಣಗೊಂಡಿದ್ದು ಈ ನಿಲುವನ್ನು ಬಿಜೆಪಿ ಯುವ ಮೋರ್ಚಾ ಖಂಡಿಸಿದೆ.
ಸೇವಾ , ಸುರಕ್ಷಾ , ಸಂಸ್ಕಾರ ಎಂಬ ಧ್ಯೇಯ ವಾಕ್ಯದೊಂದಿಗೆ, ಹಿಂದೂ ಸಮಾಜದ ರಕ್ಷಣೆಯ ಜೊತೆಗೆ ಅಶಕ್ತರ ಸೇವೆಯಲ್ಲಿಯೂ ಸಮಾಜದಲ್ಲಿ ಮಹತ್ತರ ಪಾತ್ರ ವಹಿಸಿರುವ ಸಂಘಟನೆ ಬಜರಂಗದಳ ವನ್ನು ಉಗ್ರಸಂಘಟನೆ ಪಿ.ಎಫ್‌.ಐ. ಜೊತೆ ಹೋಲಿಸಿರುವುದು ಕಾಂಗ್ರೆಸ್ ನ ಹಿಂದೂ ದ್ವೇಷ ಮತ್ತು ನೈತಿಕ ದೀವಾಳಿತನಕ್ಕೆ ಸಾಕ್ಷಿ.ಪಿ.ಎಫ್.ಐ.ಅನ್ನು ಈಗಾಗಲೇ ಕೇಂದ್ರ ಸರಕಾರ ನಿಷೇಧಿಸಿದ್ದು, ತಾವೂ ಸಹ ನಿಷೇಧಿಸುತ್ತೇವೆ ಕಾಂಗ್ರೆಸ್ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ.ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ” ಹಿಂದೂ ಕಾರ್ಯಕರ್ತರ ಮನಗೆ ಬುಲ್ಡೋಜರ್ ನುಗ್ಗಿಸಿ” ಎಂಬ ಹೇಳಿಕೆ , ಹಾಗೆಯೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿಯನ್ನು ಸಮರ್ಥಿಸಿದ್ದು ಮಾತ್ರವಲ್ಲದೇ ಅಧಿಕಾರಕ್ಕೆ ಬಂದರೆ ಗೋಹತ್ಯಾ ನಿಷೇಧ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ಬಗ್ಗೆ ಸ್ಪಷ್ಟವಾಗಿ ಮಾದ್ಯಮಗಳ ಮುಂದೆಯೇ ತಿಳಿಸಿದ್ದು , ಕಾಂಗ್ರೆಸ್ ನ ಅತಿಯಾದ ಓಲೈಕೆ ರಾಜಕಾರಣವನ್ನು ಎತ್ತಿ ತೋರಿಸುತ್ತದೆ
ಹಿಂದೂ ದ್ವೇಷ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ
ಈ ಹಿಂದಿನ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆ, ಟಿಪ್ಪು ಜಯಂತಿ ಗಲಭೆಗಳನ್ನು ನಾಡಿನ ಜನತೆ ಮರೆತಿಲ್ಲ, ಕ್ಷಮಿಸಿಲ್ಲ.
ಮಾತ್ರವಲ್ಲ, ಕನ್ನಡದ ಮಣ್ಣಲ್ಲಿ ಹುಟ್ಟಿದ ಹನುಮನ ಪ್ರೇರಣೆಯಿಂದ ಬೆಳೆದ ಸಂಘಟನೆ ಬಜರಂಗದಳದ ನಿಷೇಧದ ಮೂಲಕ ಸಮಸ್ತ ಕನ್ನಡಿಗರಿಗೂ ಕಾಂಗ್ರೆಸ್ ಅವಮಾನಿಸಿದೆ.
ಬಿಜೆಪಿ ಯುವ ಮೋರ್ಚಾ ಬಜರಂಗದಳದ ಪ್ರತಿಯೊಬ್ಬ ಕಾರ್ಯಕರ್ತನ ಜೊತೆಗೆ ನಿಲ್ಲುತ್ತದೆ ಮಾತ್ರವಲ್ಲ ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿಯನ್ನು ಉಗ್ರವಾಗಿ ವಿರೋಧಿಸುತ್ತದೆ.ಈ ಬಾರಿಯ ಚುನಾವಣೆಯಲ್ಲಿ ಜನರು ಮತದಾನದ ಮೂಲಕವೇ ಇದಕ್ಕೆ ಉತ್ತರ ನೀಡಿ, ಕಾಂಗ್ರೆಸ್ ಅನ್ನು ನಿಷೇಧಿಸಬೇಕು ಎಂದು ಯುವ ಮೋರ್ಚಾ ಸುಳ್ಯ ಮಂಡಲ ನಾಡಿನ ಮಹಾ ಜನತೆಗೆ ಮನವಿ ಮಾಡುತ್ತದೆ.