ವಿದ್ಯಾ ಹರೀಶ್ ಬಂಗಾರ ಕೋಡಿಯವರಿಗೆ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ

0

ಕೇರಳದ ತಲಶೇರಿಯಲ್ಲಿ ನಡೆದ ಓಪನ್ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 400 ಮೀಟರ್ ಮತ್ತು 800 ಮೀಟರ್ ಓಟದ ಸ್ಪರ್ಧೆಯಲ್ಲಿ ಬಂಗಾರ ಕೋಡಿಯ ವಿದ್ಯಾ ಹರೀಶ್ ರವರು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.


ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದ ಇವರು ಕೊಡಗಿನ ಪಾಣತ್ತಿಲ ಕ್ರಿಕೆಟ್ ಕಪ್ ಮರುಗೊಡ್ ಟೀಮ್ ನಲ್ಲಿ ಆಟವಾಡಿರುತ್ತಾರೆ.
ವಿದ್ಯಾ ಹರೀಶ್ ಬಂಗಾರಕೋಡಿ ಅವರು ರಂಗತ್ತಮಲೆ ಕೂಸಪ್ಪ ಗೌಡ ಮತ್ತು ಸಣ್ಣಮ್ಮ ದಂಪತಿಯ ಪುತ್ರಿ.