ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಮತ್ತು ಡಾ.ಪ್ರಭಾಕರ ಶಿಶಿಲರ ಕೃತಿ ಬಿಡುಗಡೆ

0

ರಾಜಕೀಯ ವ್ಯವಸ್ಥೆಯಿಂದ ಕನ್ನಡ ಅಸ್ಮಿತೆಗೆ ತೊಂದರೆ; ಡಾ.ಶಿಶಿಲ


ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರಕಾರಿ ಪ್ರ.ದ. ಕಾಲೇಜು ಕೊಡಿಯಾಲ ಬೈಲು ಸುಳ್ಯ,ಆಂತರಿಕ ಗುಣಮಟ್ಟ ಭರವಸ ಕೋಶ,ಸಂಕಲ್ಪ ಕನ್ನಡ ಸಂಘ ಕನ್ನಡ ವಿಭಾಗ ಇದರ ಸಹಯೋಗದಲ್ಲಿ ಸ .ಪ್ರ‌‌ಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಹಾಗೂ ಡಾ.ಪ್ರಭಾಕರ ಶಿಶಿಲರವರ ಅಮರ ಸುಳ್ಯದ ಕ್ರಾಂತಿ 1837 ನಾಟಕ ಕೃತಿಯನ್ನು ಮೇ.5 ರಂದು ಬಿಡುಗಡೆ ಮಾಡಲಾಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೆ. ಆರ್ .ಉದ್ಘಾಟಿಸಲಿರುವರು. ಸಭೆಯ ಅಧ್ಯಕ್ಷತೆಯನ್ನು ಕ.ಸಾ‌.ಪ.ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು.ಕನ್ನಡದ ಅಸ್ಮಿತೆ – ಕನ್ನಡ ಸಾಹಿತ್ಯ ಪರಿಷತ್ತು ಈ ವಿಷಯದ ಬಗ್ಗೆ ಖ್ಯಾತ ಸಾಹಿತಿ ಡಾ. ಪ್ರಭಾಕರ ಶಿಶಿಲ ಉಪನ್ಯಾಸ ನೀಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಕರ್ನಾಟಕ ಸಾಹಿತ್ಯ ಪರಿಷತ್ ,ಕನ್ನಡ ಸಾಹಿತ್ಯ ಪರಿಷತ್ ಆಗಿ ಬದಲಾವಣೆಯಾಯಿತು.ಜಾಗತೀಕರಣ ಮತ್ತು ಕೋಮುವಾದದಿಂದಾಗಿ ಕನ್ನಡದ ಅಸ್ಮಿತೆಗೆ ತೊಂದರೆಯುಂಟಾಗಿದೆ.ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಆಡಳಿತ ಸರಕಾರಕ್ಕೆ ನಿಷ್ಠೆ ಇರುವ ಸಾಹಿತಿಗಳ ಆಯ್ಕೆಯಿಂದಾಗಿ ಅರ್ಹ ಸಾಹಿತಿಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ವಿಕೇಂದ್ರೀಕರಣಗೊಂಡಾಗ ಇನ್ನಷ್ಟು ಸಾಹಿತಿಗಳಿಗೆ ಅವಕಾಶವಾಗುತ್ತದೆ.ಕನ್ನಡ ಪುಸ್ತಕಗಳನ್ನು ಕೊಂಡು ಓದುವಂತೆ ಮಾಡುವ ಜವಾಬ್ದಾರಿಯನ್ನು ಸಾಹಿತ್ಯ ಪರಿಷತ್ ವಹಿಸಿಕೊಳ್ಳಬೇಕು. ತರಗತಿಗಳಲ್ಲಿ ಕನ್ನಡ ಪುಸ್ತಕಗಳ ವಿಮರ್ಶೆ ನಡೆಯಬೇಕು ಎಂದು ಡಾ.ಶಿಶಿಲ ಹೇಳಿದರು.ಶಿಶಿಲ ಅವರ ನಾಟಕ ಅಮರ ಸುಳ್ಯ ಕ್ರಾಂತಿ 1837 ಇದರ ಕೃತಿ ಬಿಡುಗಡೆಯನ್ನು ಸುಳ್ಯ ಸ.ಪ್ರ‌.ದ.ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಶಿ ಮಾಡಿದರು.ಜಿಲ್ಲಾ ಕಸಾಪ ಪ್ರತಿನಿಧಿ ರಾಮ ಚಂದ್ರ ಪಲ್ಲತಡ್ಕ,ಕಾಲೇಜಿನ ಆಂತರಿಕ ಗುಣಮಟ್ಟ ಭರವಸ ಕೋಶದ ಸಂಯೋಜಕರಾದ ಡಾ.ಜಯಶ್ರೀ ಕೆ, ಕ.ಸಾ.ಪ.ಗೌರವ ಕೋಶಾಧಿಕಾರಿ ದಯಾನಂದ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ.ಸಾ.ಪ.ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ ಸ್ವಾಗತಿಸಿ, ಶ್ರೀಮತಿ ಚಂದ್ರಮತಿ ಕೆ.ವಂದಿಸಿದರು. ಕ.ಸಾ.ಪ.ನಿರ್ದೇಶಕಿ ಶ್ರೀಮತಿ ಲತಾಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.