ಚೆಂಬು : ಮಾಡ ಉಳ್ಳಾಕುಲು ದೈವಸ್ಥಾನದಲ್ಲಿ ಕಾಲಾವಧಿ ಪಗ್ಗು ನೇಮೋತ್ಸವ

0


ಮಡಿಕೇರಿ ತಾಲ್ಲೂಕು ಚೆಂಬು ಗ್ರಾಮದ ಶ್ರೀ ಮಾಡ ಉಳ್ಳಾಕುಲು ದೈವಸ್ಥಾನದಲ್ಲಿ ಕಾಲಾವಧಿ ಪಗ್ಗು ನೇಮೋತ್ಸವವು ಮೇ. ೦೬ ರಂದು ನಡೆಯಿತು. ಎ. ೨೮ ರಂದು ಗೊನೆ ಕಡಿಯುವುದರಿಂದ ಆರಂಭಗೊಂಡು ಮೇ. ೩ರಂದು ವಾಲಸಿರಿ, ಮತ್ತು ಮೇ. ೬ರಂದು ನೇಮೋತ್ಸವ, ನಂತರ ಪುರುಷ ದೈವ, ಅಡ್ಯoತಾಯ, ರುದ್ರಚಾಮುಂಡಿ, ಪೊಟ್ಟ ಮತ್ತು ಪಂಜುರ್ಲಿ ದೈವಗಳ ಉತ್ಸವವು ನಡೆಯಿತು. ಊರ ಮತ್ತು ಪರವೂರ ಸಾವಿರಾರು ಭಕ್ತರು ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು.