ಮೇಲ್ನಾಡು ಚಂದ್ರಶೇಖರ ಅವರ ವೈಕುಂಠ ಸಮಾರಂಭ

0

ಸುಬ್ರಹ್ಮಣ್ಯದ ಅನೇಕ ಮನೆಗಳಿಗೆ ಸಾಂತ್ವಾನ ಹೇಳಿ ಕಣ್ಣೊರೆಸಿದ ವ್ಯಕ್ತಿ ಚಂದ್ರಶೇಖರ್: ಅಣ್ಣಾ ವಿನಯಚಂದ್ರ

ನನ್ನ ಬಂಧುಗಳಿಂದ ಒಂದಷ್ಟು ಹೆಚ್ಚು ಸಂಬಂಧ ಅವರೊಂದಿಗಿತ್ತು : ಸೀತಾರಾಮ ರೈ

ಸುಬ್ರಹ್ಮಣ್ಯದ ಅನೇಕ ಮನೆಗಳಿಗೆ ಸಾತ್ವಾನ ಹೇಳಿ ಕಣ್ಣೊರೆಸಿದ ವ್ಯಕ್ತಿಯಾಗಿ ಮೇಲ್ನಾಡು ಚಂದ್ರಶೇಖರ ಮೂಡಿಬಂದಿದ್ದರು. ಎಂದು ಅಣ್ಣಾ ವಿನಯಚಂದ್ರ ನುಡಿನಮನ ಅರ್ಪಿಸಿದರು. ಅವರ ಚಂದ್ರಶೇಖರ ಮೇಲ್ನಾಡು ಅವರ ವೈಕುಂಠ ಸಮಾರಂಭದಲ್ಲಿ ನುಡಿನಮನ ಸಲ್ಲಿಸಿ ಮಾತನಾಡುತಿದ್ದರು. ಜೀವನದಲ್ಲಿ ಸಜ್ಜನರಾಗಿ ಬಾಳಿದವರು ಚಂದ್ರಶೇಖರ್,ಒಳ್ಳೆಯ ರೀತಿಯಲ್ಲಿ ಇದ್ದರೆ ಮುಂದಿನ ಜನ್ಮದಲ್ಲಿ ಒಳ್ಳೆಯದಾಗಿಯೇ ಇರುತ್ತದೆ. ಹಾಗೇ ಬಾಳಿದವರು ಮೇಲ್ನಾಡು ಅವರು. ಅವರ ಕಾರ್ಯ ವೈಕರಿ ನೋಡಿಯೇ ಅವರನ್ನು ಜನ ಸಂಘದ ಕಾರ್ಯದರ್ಶಿಯಾಗಿ ಮಾಡಿದ್ದೆವು. ಜನ ಸಂಘ ಹೋಳಾದಾಗ ಬಿಜೆಪಿಯ ಪಾರ್ಟಿಯ ಮೊದಲ ಅಧ್ಯಕ್ಷರಾದವರು ಚಂದ್ರಶೇಖರ್. ಸ್ವತಹ: ಕೈಯಿಂದ ಹಣ ಹಾಕಿ ಬಿಜೆಪಿ ಕಟ್ಟಿದವರು ಎಂದವರು ಹೇಳಿದರು.

ಸೀತಾರಾಮ ರೈ ನುಡಿನಮನ ಸಲ್ಲಿಸುತ್ತಾ ಏನೆಕಲ್ಲು ಸೊಸೈಟಿಗೆ ನಿರ್ದೇಶಕನಾಗಿ ಮಾಡಿದ ಬಳಿಕ ನಮ್ಮ ಭಾಂದವ್ಯ ಹೆಚ್ಚಿತ್ತು. ನನ್ನ ಬಂಧುಗಳಿಂದ ಒಂದಷ್ಟು ಹೆಚ್ಚು ಸಂಬಂಧ ನಮ್ಮಿಬ್ಬರದ್ದು. 54 ವರ್ಷಗಳ ಸಂಬಂಧ ನಮ್ಮದು
ಎಂದರು.

ಅಶೋಕ್ ನೆಕ್ರಾಜೆ ಮಾತನಾಡಿ ನಮ್ಮ ಏನೆಕಲ್ಲು ಸೊಸೈಟಿಯ ಅಡಿಪಾಯ ಚಂದ್ರಶೇಖರ್ . ಅವರು ತನ್ನ ಸ್ವಂತ ಬುಲೆಟ್, ಜೀಪ್, ಕೃಷಿಯ ಹಣವನ್ನು ಹಾಕಿ ಬಿಜೆಪಿ ಕಟ್ಟಿದ ವ್ಯಕ್ತಿ. ಹುಟ್ಟು ಸಾವಿನ ಮಧ್ಯೆ ಚಂದ್ರಶೇಖರ ಅವರು ಸುಬ್ರಹ್ಮಣ್ಯ ವ್ಯಾಪ್ತಿಯ ಹತ್ತು ಹಲವು ಸಮಸ್ಯೆಯನ್ನು ಬಗೆಹರಿಸಿದ ಮಹಾನುಭಾವ ಎಂದರು.

ಧರ್ಮಪಾಲ ಎಣ್ಣೆಮಜಲು ಮಾತನಾಡಿ ಚಂದ್ರಶೇಖರ ಮೇಲ್ನಾಡು ಅವರು ರಾಜಕೀಯವಾಗಿ ಬೆಳೆದು ಎಂ.ಎಲ್.ಎ ಆಗಬೇಕಾದ ವ್ಯಕ್ತಿ . “ಅನಾಸೇಯೇ ಮರಣಂ” ಎಂಬಂತೆ ಚಂದ್ರಶೇಖರ ಮೇಲ್ನಾಡು ಅವರಿಗೆ ಮರಣ ಬಂದಿದೆ ಅಂದರೆ ಅವರು ಪುಣ್ಯವಂತ. ಮನುಷ್ಯ ಸತ್ತಾಗ ಉಸಿರು ಇರುವುದಿಲ್ಲ ಆದರೆ ಹೆಸರು ಇರುತ್ತದೆ. ವಯಸ್ಸು ಇದ್ದಾಗ ಸಕಾಲದ ಬುದ್ದಿ ಬರುತ್ತದೋ ಅವನು ಸದಾ ಜೀವಂತವಾಗಿರುವನು ಎಂದರು.

ಕಾರ್ಯಕ್ರಮವು ಏನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಸಂತೃಪ್ತಿ ಸಭಾಭವನದಲ್ಲಿ ನಡೆದಿದ್ದು ಸಭಾ ಕಾರ್ಯಕ್ರಮವನ್ನು ದಿನೇಶ್ ಮೆದು ನಿರ್ವಹಿಸಿದರು. ನುಡಿನಮನದ ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು. ಬಳಿಕ ಸೇರಿದ್ದ ಎಲ್ಲಾ ಬಂಧುಗಳು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.