ವೋಟರ್ಸ್ ಸ್ಲಿಪ್ ನೊಂದಿಗೆ ಪಕ್ಷದ ಪ್ರಚಾರ ನೋಟೀಸ್ ಹಂಚಿದ ಆರೋಪ

0

ಸಂಕಷ್ಟದಲ್ಲಿ ಸಿಲುಕಿರುವ ಬಿ.ಎಲ್.ಒ.ಗಳು

ವೋಟರ್ಸ್ ಸ್ಲಿಪ್ ಅನ್ನು ಮತದಾರರ ಮನೆಗೆ ತಲುಪಿಸುವಾಗ ರಾಜಕೀಯ ಪಕ್ಷವೊಂದರ ಪ್ರಚಾರದ ಕರಪತ್ರವನ್ನು ಕೂಡ ಜತೆಗೆ ವಿತರಿಸಿದ ಆರೋಪಕ್ಕೊಳಗಾಗಿರುವ ಬಿ.ಎಲ್.ಒ. ಗಳಿಬ್ಬರು ಸಂಕಷ್ಟಕ್ಕೊಳಗಾಗಿರುವ ಘಟನೆ ವರದಿಯಾಗಿದೆ.
ಜಾಲ್ಸೂರು ಗ್ರಾಮದ ಎರಡು ಬೂತ್ ಗಳಲ್ಲಿ ಬಿ.ಜೆ.ಪಿ.ಯ ಪ್ರಚಾರ ಸಾಮಾಗ್ರಿಯನ್ನು ವೋಟರ್ಸ್ ಸ್ಲಿಪ್ ನೊಂದಿಗೆ ಕೊಟ್ಟಿರುವ ಘಟನೆ ನಡೆದಿರುವುದಾಗಿ ಹೇಳಲಾಗಿದ್ದು ಈ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾಧಿಕಾರಿಗಳು ಈ ಬಗ್ಗೆ ತನಿಖೆಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಮರಮುಡ್ನೂರು ಗ್ರಾಮದಲ್ಲೂ ಇಂತಹ ಪ್ರಕರಣ ನಡೆದಿರುವುದಾಗಿ ಹೇಳಲಾಗಿದೆ.