ಇಲ್ಲಿ ಮತಗಟ್ಟೆಯೊಳಗೆ ಹೋಗುವಾಗ ಮೊಬೈಲ್ ಹೊರಗಿಟ್ಟು ಹೋಗಬೇಕು, ಅಲ್ಲೊಬ್ಬ ಮತಚಲಾವಣೆಯನ್ನು ರೆಕಾರ್ಡ್ ಮಾಡಿ ಕಳಿಸಿದ್ದಾನೆ ನೋಡಿ..!

0

ಇದು ಮಂಗಳೂರು ಕ್ಷೇತ್ರದ ಇಂದಿನ ಮತಚಲಾವಣೆಯ ಒಂದು ದೃಶ್ಯ.  ಇದನ್ನು ಚಿತ್ರೀಕರಿಸಿಕೊಂಡ ವ್ಯಕ್ತಿ ತಾನು ಎಸ್.ಡಿ.ಪಿ.ಐ. ಅಭ್ಯರ್ಥಿ ರಿಯಾಜ್ ಪರಂಗಿಪೇಟೆಯವರಿಗೆ ಬಟನ್ ಒತ್ತಿ ಮತಚಲಾಯಿಸುವುದನ್ನು ಬಹಿರಂಗಪಡಿಸಿದ್ದಾನೆ.

*ಇದು ಹೇಗೆ ಸಾಧ್ಯವಾಯಿತು?  ಎಂಬುದೇ ಯಕ್ಷ ಪ್ರಶ್ನೆ*

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಮತಗಟ್ಟೆಯ ಒಳಗೆ ಹೋಗುವಾಗ ಮೊಬೈಲ್ ಹೊರಗಿಟ್ಟು ಹೋಗಬೇಕು. ಮತಗಟ್ಟೆಯ ಭದ್ರತಾ ಸಿಬ್ಬಂದಿ ಈ ವಿಚಾರದಲ್ಲಿ ಬಹಳ ಸ್ಟ್ರಿಕ್ಟ್ ಆಗಿ ಇದ್ದರು. ಆದರೆ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರೊಬ್ಬರು ಮೊಬೈಲ್ ಮತಗಟ್ಟೆಯ ಒಳಗೆ ಕೊಂಡೊಯ್ದುದಲ್ಲದೆ ಮತಚಲಾವಣೆಯನ್ನು ಚಿತ್ರೀಕರಿಸಿ ಗೌಪ್ಯತೆಯನ್ನು ಉಲ್ಲಂಘಿಸಿದ್ದಾರೆ.