ಆಲೆಟ್ಟಿ (ನಾರ್ಕೋಡು) ಶಾಲೆಯಲ್ಲಿ ಎಲ್.ಕೆ.ಜಿ,ಯು.ಕೆ.ಜಿ ತರಗತಿ ಆರಂಭದ ಕುರಿತು ಪೂರ್ವ ಭಾವಿ ಸಭೆ

0

ಆಲೆಟ್ಟಿ (ನಾರ್ಕೋಡು) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ ವರ್ಷದಿಂದ ಎಲ್.ಕೆ.ಜಿ ,ಯು.ಕೆ.ಜಿ ತರಗತಿ ಆರಂಭಿಸುವ ಕುರಿತು ಪ್ರಥಮ ಹಂತದ ಪೂರ್ವ ಭಾವಿ ಸಭೆಯು ನಿರ್ವಹಣಾ ಸಮಿತಿ ಅಧ್ಯಕ್ಷ ಚಂದ್ರಕಾಂತ ನಾರ್ಕೋಡು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
2023 ರ ಜೂನ್ ತಿಂಗಳ ಪ್ರಾರಂಭದಲ್ಲಿ ತರಗತಿ ಆರಂಭಿಸುವುದಾಗಿ ತೀರ್ಮಾನಿಸಲಾಗಿದ್ದು ದಾಖಲಾತಿ ದಿನವನ್ನು ಈ ಸಂದರ್ಭದಲ್ಲಿ ನಿಗದಿಪಡಿಸಲಾಯಿತು.
ಗ್ರಾಮದ ಮನೆಗಳಿಗೆ ಸಮಿತಿಯ ಸದಸ್ಯರು ಭೇಟಿ ನೀಡಿ ಮಕ್ಕಳ ದಾಖಲಾತಿ ಬಗ್ಗೆ ತಿಳಿಸುವುದಾಗಿ ಅಭಿಪ್ರಾಯ ವ್ಯಕ್ತವಾಯಿತು. ತರಗತಿ ಆರಂಭದ ದಿನದಂದು ಸಮಾರಂಭ ಏರ್ಪಡಿಸಿ ಉದ್ಘಾಟನೆಯನ್ನು ಅತಿಥಿಗಳಿಂದ ನೆರವೇರಿಸುವುದಾಗಿ ತೀರ್ಮಾನಿಸಲಾಯಿತು.


ವೇದಿಕೆಯಲ್ಲಿ ನಿರ್ವಹಣಾ ಸಮಿತಿ ಪದಾಧಿಕಾರಿಗಳಾದ ಜಯಪ್ರಕಾಶ್ ಕುಂಚಡ್ಕ, ನಿವೃತ್ತ ಶಿಕ್ಷಕ ವೆಂಕಪ್ಪ ಮಾಸ್ತರ್ ಕುಂಚಡ್ಕ, ತೀರ್ಥಕುಮಾರ್ ಕುಂಚಡ್ಕ, ಶಿಕ್ಷಕ ಸುನಿಲ್ ಕುಮಾರ್ , ರಾಮಚಂದ್ರ ಆಲೆಟ್ಟಿ, ಪ್ರಶಾಂತ್ ಕೋಲ್ಚಾರು, ತಾರನಾಥ ಕಲ್ಲೆಂಬಿ, ಶಿವಪ್ರಸಾದ್ ಆಲೆಟ್ಟಿ, ಶಾಲಾ ಶಿಕ್ಷಕಿ‌ ಸೀತಮ್ಮ ಕುಡೆಕಲ್ಲು, ಕಲ್ಪಲತಾ ಹಾಗೂ
ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ
ಜಯಪ್ರಕಾಶ್ ಕುಂಚಡ್ಕ ರವರು ಸಹಾಯ ಧನ ನೀಡುವ ಮೂಲಕ ಚಾಲನೆ ನೀಡಿದರು.
ಶಿಕ್ಷಕ ಸುನಿಲ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.