ಪದ್ಮಪ್ಪ ಹಳೆಗೇಟು ನಿಧನ

0

ಹಳೆಗೇಟು ಹೊಸಗದ್ದೆ ಸಮೀಪ ನಿವಾಸಿ ದಿ. ಕೊರಗ ರವರ ಪುತ್ರ ಪದ್ಮಪ್ಪ (54 ವರ್ಷ) ಮೇ 13 ರಂದು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


ಸುಳ್ಯದ ಹಳೆಗೇಟು ಅಡ್ಕ ಪರಿಸರದಲ್ಲಿ ಕೂಲಿ ಕೆಲಸ ಮಾಡಿ ಜೀವಿಸುತ್ತಿದ್ದ ಪದ್ಮಪ್ಪ ಸರ್ವರ ಆತ್ಮೀಯರಾಗಿದ್ದರು. ಕೆಲವು ಮಿಮಿಕ್ರಿ ಕಲೆಗಳನ್ನು ಹೊಂದಿದ್ದ ಇವರು ಸ್ಥಳೀಯ ಯುವಕರನ್ನು ರಂಜಿಸುತ್ತಿದ್ದರು.


ಕಳೆದ ಒಂದು ವಾರಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಇವರನ್ನು ಮನೆಯವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 13 ರಂದು ಬೆಳಿಗ್ಗೆ ಅವರು ನಿಧನರಾಗಿದ್ದಾರೆ.


ಮೃತರು ಪತ್ನಿ ನಳಿನಿ, ಪುತ್ರ ಚಂದ್ರಶೇಖರ, ಪುತ್ರಿ ರೂಪಲತಾ, ಹಾಗೂ ಸಹೋದರ ಸಹೋದರಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.