ಬೈಕ್-ಸ್ಕೂಟಿ ಅಪಘಾತ : ಎನ್ನೆಂಸಿ ವಿದ್ಯಾರ್ಥಿ ಗಂಭೀರ

0


ಕುರುಂಜಿಭಾಗ್‌ನಲ್ಲಿ ನಿನ್ನೆ ಸಂಜೆ ಬೈಕ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಸ್ಕೂಟಿಯಲ್ಲಿದ್ದ ಸುಳ್ಯ ಎನ್ನೆಂಸಿಯ ವಿದ್ಯಾರ್ಥಿ ವಿಘ್ನೇಶ್ ಗಂಭೀರ ಗಾಯಗೊಂಡ ಘಟನೆ ವರಿಯಾಗಿದೆ.


ಕುರುಂಜಿಭಾಗ್ ಬಳಿ ವಿಘ್ನೇಶ್‌ರವರು ಚಲಾಯಿಸುತ್ತಿದ್ದ ಸ್ಕೂಟಿ ಹಾಗೂ ಎದುರುಭಾಗದಿಂದ ಬಂದ ಅಭಿಷೇಕ್ ಎಂಬವರ ಬೈಕ್ ಪರಸ್ಪರ ಡಿಕ್ಕಿಯಾಯಿತು. ಪರಿಣಾಮ ವಿಘ್ನೇಶ್‌ರವರು ರಸ್ತೆಗೆ ಎಸೆಯಲ್ಪಟ್ಟು, ಅವರ ತಲೆಗೆ ಗಂಭೀರ ಗಾಯಗಳಾಯಿತು. ಅಭಿಷೇಕ್‌ರವರಿಗೂ ಗಾಯಗಳಾಗಿದೆ. ಇಬ್ಬರನ್ನೂ ಕೆವಿಜಿ ಆಸ್ಪತ್ರೆಗೆ ಕರೆತರಲಾಯಿತು. ವಿಘ್ನೇಶ್‌ರವರ ಹಣೆಗೆ ಗಂಭೀರ ಗಾಯಗಳಾಗಿರುವುದರಿಂದ ವೈದ್ಯರ ಸಲಹೆ ಮೇರೆಗೆ ಅವರನ್ನು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.


ವಿಘ್ನೇಶ್‌ರವರ ಕುಟುಂಬ ಬಡ ಕುಟುಂಬವಾಗಿದ್ದು, ತಕ್ಷಣ ಆಪರೇಷನ್‌ಗಾಗಿ 2.5 ಲಕ್ಷದಷ್ಟು ಹಣದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿರುವುದರಿಂದ ಸಹಾಯ ಮಾಡಲಿಚ್ಚಿಸುವವರು ಈ ನಂಬರ್‌ಗೆ ಸಹಾಯ ಮಾಬಹುದು ಎಂದು ವಿಘ್ನೇಶ್‌ರವರ ಸ್ನೇಹಿತರು ತಿಳಿಸಿದ್ದಾರೆ.

Google Pay : 9481846448

Account Number : 64214683067

IFSC Code: SBIN0040225

Bank: Staste Bank Of India

Branch Sullia