ನಾಗಪಟ್ಟಣ ಸದಾಶಿವ ದೇವಸ್ಥಾನದಲ್ಲಿ ನೂತನ ಯಾಗ ಶಾಲೆಗೆ ಶಿಲಾನ್ಯಾಸ

0

ಅಲೆಟ್ಟಿ ಗ್ರಾಮದ ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ನೂತನ ವಾಗಿ ನಿರ್ಮಾಣಗೊಳ್ಳಲಿರುವ ಯಾಗ ಶಾಲೆಗೆ ಮೇ. 13 ರಂದು ದೇವಳದ ಶಿಲ್ಪಿ ರಮೇಶ್ ಕಾರಂತ ಕಾಸರಗೋಡು ರವರ ಮಾರ್ಗದರ್ಶನದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು. ದೇವಳದ ಅರ್ಚಕ ಶಿವಪ್ರಸಾದ್ ಪೂಜಾ ವಿಧಿ ವಿಧಾವನ್ನು ನಡೆಸಿದರು. ಸಮಿತಿ ಸದಸ್ಯರಾದ ಸುಧಾಮ ಅಲೆಟ್ಟಿ, ರಾಧಾಕೃಷ್ಣ ಕೊಲ್ಚಾರ್, ತಂಗವೇಲು ನಾಗಪಟ್ಟಣ, ಬಾಬು ಗೌಡ ನಾಗಪಟ್ಟಣ, ಕೆ .ವಿ ಹೇಮನಾಥ ಕುರುಂಜಿ, ಶ್ರೀಮತಿ ವಿಜಯಕುಮಾರಿ, ಜತ್ತಪ್ಪ ಗೌಡ ನಾಗಪಟ್ಟಣ, ಆನಂದ ಗೌಡ ಪರಿವಾರ, ಶೇಷಪ್ಪ ಆಚಾರ್ಯ, ದೇವಸ್ಥಾನದ ಸಿಬ್ಬಂದಿ ಶರತ್ ಗುಡ್ಡೆಮನೆ, ರಾಮಸುಂದರ್, ಬೆಳ್ತಮೊರಂಗಲ್ಲು ಮತ್ತು ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು.