ದಿ.ನವೀನ್ ರೈ ಮೇನಾಲರಿಗೆ ಬಿಜೆಪಿ‌ಕ ಚೇರಿಯಲ್ಲಿ ಶ್ರದ್ಧಾಂಜಲಿ

0

ನವೀನ್ ರೈ ಅಗಲಿಕೆ ಅನಾಥಪ್ರಜ್ಞೆ ಮೂಡಿಸಿದೆ : ನಾಯಕರಿಂದ ನುಡಿನಮನ

ಮೆ.18 ರಂದು‌ ನಿಧನರಾದ ಬಿಜೆಪಿ‌ ಧುರೀಣ ‌ನವೀನ್ ರೈ ಮೇನಾಲರಿಗೆ ಬಿಜೆಪಿ ಮಂಡಲ ಸಮಿತಿ ವತಿಯಿಂದ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ಬಿಜೆಪಿ ಕಚೇರಿಯಲ್ಲಿ ಮೇ.22 ರಂದು‌ ನಡೆಯಿತು.

ನುಡಿನಮನ ಸಲ್ಲಿಸಿದ ಅಜ್ಜಾವರದ ಜಿ.ಜಿ.ನಾಯಕ್ ರವರು ಮೇನಾಲದಲ್ಲಿ ಹಿಂದುಗಳ ಪರವಾಗಿ ಧೈರ್ಯ ವಾಗಿ ನಿಂತವರು ನವೀನ್ ರೈ. ಅವರು ಇನ್ನಷ್ಟು ವರ್ಷ ಸಂಘಟನೆಗೆ ಮಾರ್ಗದರ್ಶನ ನೀಡಬೇಕಿತ್ತು ಎಂದು‌ ಹೇಳಿದರಲ್ಲದೆ ಸಂಘಟನೆಯ, ಅವರ ವಿಚಾರಧಾರೆಗಳನ್ನು ಮುಂದಿಟ್ಟರು.

ಮೀನುಗಾರಿಕಾ ‌ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮರು‌ ಮಾತನಾಡಿ ಸಂಘಟನೆಯ ಮೇಲೆ ಅಪಾರ ಪ್ರೀತಿ ಗೌರವ ಇಟ್ಟವರು. ಸಂಘಟನೆಗಾಗಿ ನಿರಂತರ ದುಡಿದ ವ್ಯಕ್ತಿ‌ ನವೀನ್ ರೈ ಎಂದು ಹೇಳಿದರು.

ಹಿರಿಯ ನಾಯಕ ಎಸ್.ಎನ್.ಮನ್ಮಥ ಮಾತನಾಡಿ ನಂಬಿಕಸ್ಥ ರಾಜಕಾರಣಿ ನವೀನ್ ರೈ. ಜಿ.ಪಂ. ಚುನಾವಣೆ ಸಂದರ್ಭ ಜಾತಿ ಮತ ಮೀರಿ ಸ್ಪರ್ಧೆಗಿಳಿದು ಜಯಗಳಿದವರು. ಅವರ ಸಾತ್ವಿಕ ಗುಣ ನಮಗೂ ಆದರ್ಶವಾಗುತ್ತದೆ ಎಂದು ಹೇಳಿದರು.

ಎನ್ನೆಂಸಿ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ಯಶೋದ ರಾಮಚಂದ್ರ ಮಾತನಾಡಿ ನವೀನ್ ರೈ ದೊಡ್ಡ ಮಟ್ಟಕ್ಕೆ ಬೆಳೆದವರು. ವಿದ್ಯಾರ್ಥಿ ಯಾಗಿದ್ದಾಗ ಇದ್ದ ವಿನಯ, ನಡೆ ಈಗಲೂ ಅವರಲ್ಲಿ ಇದೆ. ನವೀನರ ಕುಟುಂಬಕ್ಕೆ ಕಾರ್ಯಕರ್ತರು ಒಂದಲ್ಲ ಒಂದು ರೀತಿಯಲ್ಲಿ ಸಹಕಾರಿಯಾಗಬೇಕು ಎಂದು ಹೇಳಿದರು.
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕಣೆಮರಡ್ಕ ಮಾತನಾಡಿ ಸಮಸ್ಯೆಗಳು ಎದುರಾದಾಗ‌ ಮೊದಲ‌ ಕರೆ‌ ಕಾರ್ಯಕರ್ತರಿಂದ ಹೋಗುತ್ತಿದ್ದುದು ನವೀನ್ ರೈಗಳಿಗೆ.‌ ಅವರ ಸಮಯ ಪ್ರಜ್ಞೆ, ಕೆಲಸದ ಕಾರ್ಯ ಮಾದರಿ. ‌ಎಲ್ಲರಿಗೂ ಸ್ಪೂರ್ತಿ ಅವರು ಎಂದು‌ ಹೇಳಿದರು.

ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ‌ ಮಾತನಾಡಿ ನವೀನ್ ರೈಯವರಿಗೆ ಅವರೇ ಸಾಟಿ. ಪಕ್ಷದೊಳಗೆ ನ್ಯೂನ್ಯತೆ ಇದ್ದರೆ ಅದನ್ನು ಸರಿಪಡಿಸಿ ಎಲ್ಲರೂ ಒಟ್ಟಾಗಿ ಹೋಗಬೇಕೆಂದು ಒತ್ತಾಯಿಸುತ್ತಿದ್ದ ವ್ಯಕ್ತಿ ಎಂದು ಹೇಳಿದರು.

ಕಾಯರ್ತೋಡಿ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಿ.ಕೆ.ಉಮೇಶ್ ಮಾತನಾಡಿ ಸಮಾಜಕ್ಕೆ ತೊಡಗಿಸಿಕೊಂಡ ವ್ಯಕ್ತಿ‌ ನವೀನ್ ರೈ ಎಂದು‌ ಹೇಳಿದರು.

ಪುತ್ತೂರು ತಾ.ಪಂ. ಮಾಜಿ ಸದಸ್ಯೆ ಪುಲಸ್ತ್ಯ ರೈ ಮಾತನಾಡಿ ಬದುಕಿದ್ದಷ್ಟು ದಿನ ಸಮಾಜಕ್ಕೆ ಸಮರ್ಪಿತವಾದ ವ್ಯಕ್ತಿ ನವೀನ್ ರೈ ಎಂದು‌ ಹೇಳಿದರು.

ಎ.ಟಿ.ಕುಸುಮಾಧರ್ ಮಾತನಾಡಿ ಸ್ವಾಭಿಮಾನಿಯಾಗಿ ಬದುಕಿದವರು ಎಂದು‌ ಹೇಳಿದರು.

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ಪಕ್ಷದಿಂದ ಕೊಟ್ಟ ಸೂಚನೆಯನ್ನು ಶಿಸ್ತಿನಿಂದ ಮಾಡುತ್ತಿದ್ದ ವ್ಯಕ್ತಿ ಅವರು
ಕಾರ್ಯಕರ್ತರೊಂದಿಗೆ ಉತ್ತಮ ಸಂಬಂಧ ಇರಿಸಿದವರು.‌ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿ ಎಂದು ಹೇಳಿದರು.

ಸುಭೋದ್ ಶೆಟ್ಟಿ ಮೇನಾಲರು ಕುಟುಂಬದ ಪರವಾಗಿ ಸಭೆಗೆ ಆಗಮಿಸಿದವರನ್ನು ವೈಕುಂಠ ಸಮಾರಾಧನಾ ಕಾರ್ಯಕ್ರಮ ದ ಆಮಂತ್ರಣ ನೀಡಿದರು.

ಬಿಜೆಪಿ‌ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ‌ ಕೆಡೆಂಜಿ ಕಾರ್ಯಕ್ರಮ ‌ನಿರೂಪಿಸಿದರು.

ಬಿಜೆಪಿ ನಾಯಕರು, ಕಾರ್ಯಕರ್ತರು ಸಭೆಯಲ್ಲಿ ದ್ದರು.