ಮಂಗಳೂರು ವಿಶ್ವ ವಿದ್ಯಾಲಯ ಹಗ್ಗ ಜಗ್ಗಾಟ ಪಂದ್ಯಾವಳಿ

0

ನೆಹರೂ ಮೆಮೋರಿಯಲ್ ಕಾಲೇಜು ಚಾಂಪಿಯನ್

ಕಾಲೇಜಿನಲ್ಲಿ ಅದ್ದೂರಿ ಸ್ವಾಗತ

ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜು ಮಂಗಳೂರು ವಿ. ವಿ. ಮಟ್ಟದ ಅಂತರ್ ಕಾಲೇಜು ಪುರುಷರ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಸತತ ಆರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಮೇ 24, ಬುಧವಾರದಂದು ಬಂಟ್ವಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವಿನಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಅಂತರ ಕಾಲೇಜು ಪುರುಷರ ವಿಭಾಗದ ಹಗ್ಗ ಜಗ್ಗಾಟ ಪಂದ್ಯದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ತಂಡದಲ್ಲಿ ವಿದ್ಯಾರ್ಥಿಗಳಾದ ಚರಣ್ ರಾಜ್, ನಿರಂಜನ್ ಕೆ, ತೇಜಸ್ ಪಿ. ಕೆ, ಗೌತಮ್, ವಿನಾಯಕ, ಅನುರಾಜ್, ದತ್ತ ಪ್ರಸಾದ್, ಇರ್ಫಾನ್, ವಿನೋದ್, ಕಾರ್ತಿಕ್ ಕೆ. ಆರ್ ಮತ್ತು ಯಕ್ಷಿತ್ ಭಾಗವಹಿಸಿದ್ದರು. ತಂಡಕ್ಕೆ ಬಾಬು ಥೋಮಸ್ ತರಬೇತಿ ನೀಡಿದ್ದರು. ಕಾಲೇಜಿನ ದೈಹಿಕ ನಿರ್ದೇಶಕರಾದ ಸೀತಾರಾಮ ಎಂ. ಡಿ ತಂಡದ ನೇತೃತ್ವ ವಹಿಸಿದ್ದರು.

ಕಾಲೇಜಿಗೆ ಆಗಮಿಸಿದ ವಿಜೇತ ತಂಡವನ್ನು ಮೆರವಣಿಗೆಯಲ್ಲಿ ಕರೆತಂದು ಹೂ ಗುಚ್ಛ ನೀಡಿ ಸ್ವಾಗತಿಸಲಾಯಿತು. ತಂಡದ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರು ಶ್ಲಾಘಿಸಿದರು.

LEAVE A REPLY

Please enter your comment!
Please enter your name here