
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶುದ್ಧ ಷಷ್ಠಿಯ ದಿನವಾದ ಇಂದು ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.
















ಮಧ್ಯಾಹ್ನದ ಭೋಜನಕ್ಕಾಗಿ ನೂಕು ನುಗ್ಗಲುನೊಂದಿಗೆ ಸೇರಿದ ಭಕ್ತಸಂದಣಿ ಕಂಡು ಬಂತು. ಕುಕ್ಕೆಶ್ರೀ ಸುಬ್ರಹ್ಮಣ್ಯದ ದೇವಸ್ಥಾನದಲ್ಲಿ ಒಳಗಡೆ ಭಕ್ತರ ಜನಸಂದಣಿ ಭಾರಿ ಪ್ರಮಾಣದಲ್ಲಿತ್ತು. ಪಾರ್ಕಿಂಗ್ ಸ್ಥಳ ತುಂಬಿತ್ತು. ರಥಬೀದಿಯುದ್ದಕ್ಕೂ ಭಕ್ತರೇ ತುಂಬಿದ್ದರು. ಶಾಲೆ ಮಕ್ಕಳ ರಜೆಯೂ ಮುಗಿಯತ್ತಾ ಬರುತಿರುವುದು ಭಕ್ತರ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದೆ.









