ಮುರುಳ್ಯ ಗ್ರಾ.ಪಂ. ಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

0

ಮುರುಳ್ಯ ಗ್ರಾಮ ಪಂಚಾಯತ್‌ಗೆ ಮೇ.25 ರಂದು ಶಾಸಕಿ ಕು.ಭಾಗೀರಥಿ ಮುರುಳ್ಯ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕು.ಜಾನಕಿ ಎಸ್., ಉಪಾಧ್ಯಕ್ಷರಾದ ವನಿತಾ ಸುವರ್ಣ ಬಾಮೂಲೆ, ಸದಸ್ಯರಾದ ಮೋನಪ್ಪ ಗೌಡ ಅಲೇಕಿ, ಕರುಣಾಕರ ಗೌಡ ಹುದೇರಿ, ಸುಂದರ ಗೌಡ ಶೇರ, ಶೀಲಾವತಿ ಗೋಳ್ತಿಲ, ಪುಷ್ಪಾಲತಾ ಕುಕ್ಕಟ್ಟೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ, ಕಾರ್ಯದರ್ಶಿ ಸೀತಾರಾಮ ಎಸ್., ಹಾಗೂ ಸಿಬ್ಬಂದಿವರ್ಗ ಮತ್ತು ಸಂಜೀವಿನಿ ಸಂಘದ ಎನ್‌ಆರ್‌ಎಲ್‌ಎಂ, ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ಇದರ ಅಧ್ಯಕ್ಷರಾದ ವಸಂತ ನಡುಬೈಲು, ಸದಸ್ಯರಾದ ರೂಪರಾಜ್ ರೈ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಅಶೋಕ್ ಕುಮಾರ್ ಊರುಸಾಗು, ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ. ಸಂಘದ ಉಪಾಧ್ಯಕ್ಷೆ ಕುಸುಮಾವತಿ ರೈ ಹಾಗೂ ಇನ್ನಿತರ ಊರಿನ ಗಣ್ಯರು ಭಾಗವಹಿಸಿದರು.

ಪಿಡಿಒ ಸ್ವಾಗತಿಸಿ, ರಂಜಿನಿ ಪ್ರಾರ್ಥಿಸಿದರು. ಗ್ರಾಮ ಪಂಚಾಯತ್ ಸಿಬ್ಬಂದಿ ಪ್ರದೀಪ್ ಎಣ್ಮೂರು ವಂದಿಸಿ, ಕಾರ್ಯದರ್ಶಿ ಸೀತಾರಾಮ ಎಸ್. ಕಾರ್ಯಕ್ರಮ ನಿರೂಪಿಸಿದರು.