ಮರ್ಕಂಜದಲ್ಲಿ ಸುರಿದ ಸಿಡಿಲು ಸಹಿತ ಗಾಳಿ ಮಳೆಗೆ ಅಪಾರ ಹಾನಿ

0

ಇಂದು ಸಂಜೆ ಸುರಿದ ಸಿಡಿಲು ಸಹಿತ ಗಾಳಿ ಮಳೆಗೆ ಮರ್ಕಂಜದಲ್ಲಿ ಅಪಾರ ಹಾನಿ ಸಂಭವಿಸಿರುವುದಾಗಿ ತಿಳಿದು ಬಂದಿದೆ.

ಸಂಜೆ ವೇಳೆ ಬೀಸಿದ ರಭಸದ ಗಾಳಿಗೆ ಮರ್ಕಂಜದ ಹಲವು ಕಡೆಗಳಲ್ಲಿ ರಬ್ಬರ್ ಮರಗಳು, ಅಡಿಕೆ ಮರಗಳು ಧರೆಗುರುಳಿದೆ. ಮರಗಳು ಬಿದ್ದು ವಿದ್ಯುತ್ ಕಂಬಗಳಿಗೂ ಹಾನಿ ಸಂಭವಿರುವುದಾಗಿ ತಿಳಿದು ಬಂದಿದೆ.‌

ಕಳೆದ ವರ್ಷವು ಮಳೆಗಾಲದ ಆರಂಭದಲ್ಲಿ ಬೀಸಿದ ರಭಸದ ಗಾಳಿಗೆ ಅನೇಕ‌ ಕಡೆಗಳಲ್ಲಿ ಅಡಿಕೆ, ರಬ್ಬರ್, ತೆಂಗು ಮತ್ತಿತರ ಮರಗಳು ಮುರಿದು ಬಿದ್ದ ಪರಿಣಾಮ ಕೃಷಿಕರು ತಮ್ಮ ಕೃಷಿಗಳನ್ನು ಕಳೆದುಕೊಂಡಿದ್ದರು. ಈ ವರ್ಷವು ಮಳೆಗಾಲರಂಭದಲ್ಲಿ ಬೀಸುತ್ತಿರುವ ಗಾಳಿಗೆ ತಮ್ಮ ಕೃಷಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಅಡಿಕೆ ಹಳದಿ ರೋಗದಿಂದ ತತ್ತರಿಸಿರುವ ಈ ಭಾಗದ ಜನರು ಮಳೆಗಾಲರಂಭದ ಗಾಳಿಯ ರುದ್ರನರ್ತನಕ್ಕೆ ಮತ್ತಷ್ಟು ಕೃಷಿಯನ್ನು ಕಳೆದುಕೊಂಡು ಸಂಕಷ್ಟ ಸಿಲುಕಿದಂತಾಗಿದೆ.

LEAVE A REPLY

Please enter your comment!
Please enter your name here