ಸುಬ್ರಹ್ಮಣ್ಯದ ಮಾದರಿ ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಸುಶೀಲಾ ಪಿ.ಜಿ. ನಿವೃತ್ತಿ

0

ಸರ್ಕಾರಿ ಮಾದರಿ ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲಾ ಪಿ.ಜಿ ಮೇ.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಒಟ್ಟು 37 ವರ್ಷಗಳ ಶಿಕ್ಷಕ ಸೇವೆಯನ್ನು ಪೂರೈಸಿದ್ದಾರೆ. 1986 ರಲ್ಲಿ ಪುತ್ತೂರು ತಾಲೂಕಿನ ತೆಗ್ಗು ಸ.ಹಿ.ಪ್ರಾ.ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆಗೆ ಸೇರಿದ ಇವರು 2001 ರ ವರೆಗೆ ಸೇವೆ ಸಲ್ಲಿಸಿದರು. ಬಳಿಕ ಮುಖ್ಯೋಪಾಧ್ಯಾಯರಾಗಿ ಭಡ್ತಿಗೊಂಡು 2005 ರ ವರೆಗೆ ಸೇವೆ ಸಲ್ಲಿಸಿದ್ದು ಅಲ್ಲಿ ಒಟ್ಟಾಗಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 2005 ರಲ್ಲಿ ಸ.ಹಿ.ಪ್ರಾ.ಶಾಲೆ ಕಟ್ಟತ್ತಾರು ಇಲ್ಲಿಗೆ ಕ್ಯಾಡರ್ ಮುಖ್ಯೋಪಾಧ್ಯಾಯರಾಗಿ ಭಡ್ತಿಗೊಂಡು ವರ್ಗಾವಣೆಯಾದರು. 2008 ರಿಂದ ಸುಬ್ರಹ್ಮಣ್ಯ ಸರ್ಕಾರಿ ಮಾದರಿ ಹಿ.ಪ್ರಾ ಶಾಲೆಗೆ ವರ್ಗಾವಣೆಗೊಂಡಿದ್ದು ಡಬ್ಬಲ್ ಪ್ರಮೋಶನ್ ಮುಖ್ಯೋಪಾಧ್ಯಾಯರಾಗಿ ಸೇವೆ ಆರಂಭಿಸಿ ಇಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿದ್ದರು. ಇವರು ಮೂಲತಹ ಮಡಿಕೇರಿಯ ಶುಂಠಿಕೊಪ್ಪದವರು. ಇವರ ಪತಿ ದಿl ಚಂದ್ರಶೇಖರ ಪಾಲ್ತಾಡು ಶಿಕ್ಷಕ ವೃತ್ತಿಯಲ್ಲಿದ್ದರು. ಮಗ ನಿತಿನ್ ಕುಮಾರ್ ಕೆ.ಸಿ ಸುರತ್ಕಲ್ ನಲ್ಲಿ ಲಸ್ಸೀ ಟೇಲ್ ಎಂಬ ಸ್ವಂತ ಕೆಫೆ ಉದ್ಯಮ ನಡೆಸುತಿದ್ದಾರೆ. ಪ್ರಸ್ತುತ ನೂಚಿಲದಲ್ಲಿ ವಾಸವಿದ್ದು ಪುತ್ತೂರಿನ ಪಾಲ್ತಾಡುವಿನಲ್ಲಿ ಸ್ವಂತ ಮನೆ ಹೊಂದಿದ್ದಾರೆ.

LEAVE A REPLY

Please enter your comment!
Please enter your name here