ಐವರ್ನಾಡು ಗ್ರಾ.ಪಂ.ಗ್ರಾಮೀಣ ಬೇಸಿಗೆ ಶಿಬಿರದ ಸಮಾರೋಪ

0

ಐವರ್ನಾಡು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ 8ನೇ ದಿನವಾದ ಮೇ.27 ರಂದು ಮಕ್ಕಳಿಗೆ ಸಂಗೀತ ತರಬೇತಿ ನೀಡಲಾಯಿತು. ಈ ಸಂಗೀತ ತರಬೇತಿಯನ್ನು ಸಂಗೀತ ಕಲಾ ವಿದರಾದ ಐವರ್ನಾಡು ಗ್ರಾಮದ ಬಿರ್ಮುಕಜೆ ಮಹಾಬಲೇಶ್ವರ ರವರು ನಡೆಸಿಕೊಟ್ಟರು.

ನಂತರ ಭಜನಾ ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯರಾದ ಮಮತಾ ಉದ್ದಂಪಾಡಿ ಇವರು ನಡೆಸಿಕೊಟ್ಟರು. ಗ್ರಾಮೀಣ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ನಡೆಸಲಾಯಿತು. ಈ ಸಮಾರೋಪ ಸಮಾರಂಭಕ್ಕೆ ಪಂಚಾಯತ್ ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯವರು ಹಾಗೂ ಸಂಗೀತ ತರಬೇತಿ ನೀಡಿದ ಮಹಾಬಲೇಶ್ವರ ರವರು ಉಪಸ್ಥಿತರಿದ್ದರು. ಮಕ್ಕಳು ವರದಿ ಮಂಡಿಸಿ ನಂತರ ತಮ್ಮ ಅನಿಸಿಕೆಯನ್ನು ಹೇಳಿದರು. ಶಿಬಿರಕ್ಕೆ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರವನ್ನು ಪಂಚಾಯತ್ ಉಪಾಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ನೀಡಿದರು. ರಾಷ್ಟ್ರ ಗೀತೆ ಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.

ಲಘು ಉಪಹಾರದ ವ್ಯವಸ್ಥೆಯನ್ನು ಸಂಪನ್ಮೂಲ ವ್ಯಕ್ತಿಯಾಗಿ ಬಂದಿರುವ ಶ್ರೀಮತಿ ಸಂದ್ಯಾ ಕುಮಾರ್ ಉಬರಡ್ಕ ಎಲಿಮಲೆ ಪ್ರೌಢ ಶಾಲೆಯ ಮುಖ್ಯಪಾಧ್ಯಾಯರು ನೀಡಿರುವರು. ಮತ್ತು ಸಂಜೀವಿನಿ ಸಂಘದ ಎಂಬಿಕೆಅಮಿತಾ ಲಾವಂತಡ್ಕ ಇವರು ನೀಡಿದರು.