ಮೇ. 31: ಎಡಮಂಗಲ ಪ್ರಾ.ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಅಂಬೆಕಲ್ಲು ನಿವೃತ್ತಿ

0

ಎಡಮಂಗಲ ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಅಂಬೆಕಲ್ಲು ಮೇ. 31ರಂದು ನಿವೃತ್ತಿ ಹೊಂದಲಿದ್ದಾರೆ.
ಕಡಬ ತಾಲೂಕು ಯೇನೆಕಲ್ಲು ಗ್ರಾಮದ ಚಿನ್ನಪ್ಪ ಗೌಡ ಮತ್ತು ಶ್ರೀಮತಿ ಕೃಷ್ಣಮ್ಮ ದಂಪತಿಯ ಪುತ್ರರಾದ ಜಗದೀಶ್ ಅಂಬೆಕಲ್ಲುರವರು ತಾ. 16.07.1985ರಲ್ಲಿ ಬೆಳ್ತಂಗಡಿ ತಾಲೂಕಿನ ಪೆರಿಯಡ್ಕ ಸ.ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ, ಗೇರುಕಟ್ಟೆ ಬಳಿಯ ಕೂರಂಜ ಸ.ಹಿ.ಪ್ರಾ. ಶಾಲೆ, ಪುತ್ತೂರು ತಾಲೂಕಿನ ಬೊಬ್ಬೆಕೇರಿ, ದೋಳ್ಪಾಡಿ ಬಳಿಕ ಸುಳ್ಯ ತಾಲೂಕಿನ ಎಣ್ಮೂರು ಶಾಲೆಗೆ ವರ್ಗಾವಣೆಗೊಂಡು, ಅಲ್ಲಿಂದ ಮುಖ್ಯೋಪಾಧ್ಯಾಯರಾಗಿ ಭಡ್ತಿಪಡೆದು ಮುರುಳ್ಯ ಶಾಂತಿನಗರ ಶಾಲೆಗೆ ವರ್ಗಾವಣೆಗೊಂಡರು. ತದನಂತರ ಪಂಬೆತ್ತಾಡಿ ಶಾಲೆಗೆ ವರ್ಗಾವಣೆಗೊಂಡು ಅಲ್ಲಿಂದ ಎಡಮಂಗಲ ಶಾಲೆಗೆ ವರ್ಗಾವಣೆಗೊಂಡು ಸುದೀರ್ಘ 38 ವರ್ಷಗಳ ಸರಕಾರಿ ಸೇವೆಯಿಂದ ಮೇ. 31ರಂದು ನಿವೃತ್ತರಾಗಲಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಶಾಲಾ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಸೇರಿದಂತೆ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು.