ದೊಡ್ಡತೋಟ ಶಾಲೆಯ ಮುಖ್ಯ ಶಿಕ್ಷಕ ಬಾಬು ಮಾಸ್ತರ್ ನಿವೃತ್ತಿ

0

ದೊಡ್ಡತೋಟ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ರಾಗಿ ಕರ್ತವ್ಯ ಸಲ್ಲಿಸುತ್ತಿದ್ದ ಬಾಬು ಮಾಸ್ತರ್ ರವರು ಮೇ.31ರಂದು ನಿವೃತ್ತಿಯಾಗಲಿದ್ದಾರೆ.‌
1986ರಲ್ಲಿ ಸ.ಕಿ.ಪ್ರಾ.ಶಾಲೆ ಪೆರ್ಲ ಬೆಳ್ತಂಗಡಿ ಇಲ್ಲಿಗೆ ಸೇವೆಗೆ ಸೇರ್ಪಡೆಗೊಂಡ ಇವರು 1987ರಲ್ಲಿ ಸ.ಕಿ.ಪ್ರಾ.ಶಾಲೆ ಕುಟ್ಟಿಕಳ, ಬೆಳ್ತಂಗಡಿ ಇಲ್ಲಿಗೆ ವರ್ಗಾಯಾಣೆಯಾದರು. 1994ರಲ್ಲಿ ಸ.ಕಿ.ಹಿ.ಪ್ರಾ.ಶಾಲೆ ಹಾಸನಡ್ಕ ಸುಳ್ಯ ಇಲ್ಲಿಗೆ ವರ್ಗಾವಣೆಗೊಂಡರು. 1999ರಲ್ಲಿ ಕೋಟೆಮುಂಡುಗಾರು ಶಾಲೆಗೆ ವರ್ಗಾವಣೆ ಯಾಗಿ 2007ರಲ್ಲಿ ಮುಖ್ಯೋಪಾಧ್ಯಾಯ ರಾಗಿ ಭಡ್ತಿಗೊಂಡು ಸ.ಕಿ.ಪ್ರಾ.ಶಾಲೆ ಕುಟ್ಟಿಕಳ ಬೆಳ್ತಂಗಡಿಗೆ ವರ್ಗಾವಣೆ ಯಾದರು. 2009ರಲ್ಲಿ ಸ.ಉ.ಹಿ.ಪ್ರಾ.ಶಾಲೆ ದೇವರಕಾನ ಐವರ್ನಾಡು ಇಲ್ಲಿಗೆ ವರ್ಗಾವಣೆ ಗೊಂಡು, 2013ರಲ್ಲಿ ಸ.ಉ.ಹಿ.ಪ್ರಾ.ಶಾಲೆ ದೊಡ್ಡತೋಟಕ್ಕೆ ವರ್ಗಾಗೊಂಡು 2023ರ ಮೇ.31ರಂದು ನಿವೃತ್ತಿಗೊಳ್ಳಲಿದ್ದಾರೆ.‌
ಇವರು ಮೂಲತಃ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದವರು. ಇವರ
ತಂದೆ ದಿ| ಗುರುವ ಮತ್ತು ತಾಯಿ ದಿ | ದೆಯ್ಯು. ಹಾಗೂ ಪತ್ನಿ ಮಲ್ಲಿ. ಭರತ್, ಭುವನ್, ಭೂಷನ್ ಮಕ್ಕಳು.