ಕಲ್ಮಡ್ಕ: ಭಾ.ಜ.ಪಾ ಕಾರ್ಯಕರ್ತರಿಂದ ಅಭಿನಂದನಾ ಸಮಾರಂಭ

0

ಕಲ್ಮಡ್ಕ ಬಿ.ಜೆ.ಪಿ ಸ್ಥಾನೀಯ ಸಮಿತಿಯ ವತಿಯಿಂದ ಮೂವತ್ತು ವರ್ಷಗಳಿಂದ ಶಾಸಕರಾಗಿ , ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದ ಸನ್ಮಾನ್ಯ ಎಸ್. ಅಂಗಾರರವರಿಗೆ ಹಾಗೂ ಅತ್ಯಧಿಕ ಮತಗಳನ್ನು ಪಡೆದು ನೂತನ ಶಾಸಕಿಯಾಗಿ ಆಯ್ಕೆಗೊಂಡ ಕು.ಭಾಗೀರಥಿ ಮುರುಳ್ಯರವರಿಗೆ ಹಾಗೂ ಕಾರ್ಯಕರ್ತ ಬಂಧು – ಭಗಿನಿಯರಿಗೆ ಅಭಿನಂದನಾ ಕಾರ್ಯಕ್ರಮ ಮೇ. 27 ರಂದು ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾ.ಜ.ಪಾ . ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ವಹಿಸಿದ್ದರು.
ಮೂವತ್ತು ವರ್ಷಗಳಿಂದ ಶಾಸಕರಾಗಿ, ಸಚಿವರಾಗಿ ಕರ್ತವ್ಯ ನಿರ್ವಹಿದ್ದ ಸರಳ ಸಜ್ಜನಿಕೆ ವ್ಯಕ್ತಿತ್ವದ ಸನ್ಮಾನ್ಯ ಎಸ್. ಅಂಗಾರರವರನ್ನು ಹಾಗೂ ನೂತನ ಶಾಸಕಿಯಾಗಿ ಆಯ್ಕೆಗೊಂಡ ಕು.ಭಾಗೀರಥಿ ಮುರುಳ್ಯ ರವರನ್ನು ಕಾರ್ಯಕರ್ತರು ಅಭಿನಂದಿಸಿ ಗೌರವಿಸಿದರು. ರೈತ ಮೋರ್ಚದ ಉಪಾಧ್ಯಕ್ಷ ಎ.ವಿ. ತೀರ್ಥಾರಾಮ ,
ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಸಂತ ನಡುಬೈಲು , ಕಲ್ಮಡ್ಕ ಬೂತ್ ಪ್ರಮುಖ್ ಲಕ್ಷ್ಮೀನಾರಾಯಣ ನಡ್ಕ, ಸ್ಥಾನೀಯ ಸಮಿತಿ ಸಂಚಾಲಕ. ರಮೇಶ್. ಭಟ್ ತಿಪ್ಪನಕಜೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಹಿರಿಯ ಕಾರ್ಯಕರ್ತರಾದ ಶಿವರಾಮ ಭಟ್ ಸ್ವಾಗತಿಸಿ , ಅಭಿನಂದನಾ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಸ್ಥಾನೀಯ ಸಮಿತಿಯ ಸದಸ್ಯ ಶ್ರೀನಿವಾಸ ಜೋಗಿಬೆಟ್ಟು ದೇಶಭಕ್ತಿ ಗೀತೆ ಹಾಡಿದರು.ಕಾರ್ಯದರ್ಶಿ
ತೀರ್ಥಾನಂದ ಕಲ್ಮಡ್ಕ ವಂದಿಸಿದರು.


ಸ್ಥಾನೀಯ ಸಮಿತಿ ಅಧ್ಯಕ್ಷೆ ಶ್ರೀಮತಿ ನಳಿನಾಕ್ಷಿ . ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here