ಜಾಲ್ಸೂರು: ಗ್ರಾ.ಪಂ. ಸಾಮಾನ್ಯ ಸಭೆ

0

ಮನೆತೆರಿಗೆ ಪಾವತಿ ಕಡಿಮೆ ಮಾಡುವಂತೆ ಗ್ರಾಮಸ್ಥರಿಂದ ಮನವಿ – ಪ್ರತಿಭಟನೆಯ ಎಚ್ಚರಿಕೆ

ಸೋಣಂಗೇರಿಯಲ್ಲಿ ಬಸ್ಸು ತಂಗುದಾಣ ನಿರ್ಮಾಣಕ್ಕೆ ಸುಳ್ಯ ಲಯನ್ಸ್ ಕ್ಲಬ್ ಗೆ ಮನವಿಗೆ ನಿರ್ಧಾರ

ಮನೆ ತೆರಿಗೆ ಪಾವತಿ ಕೆಲವೊಂದು ಮನೆಯವರಿಗೆ ಹೆಚ್ಚು , ಇನ್ನು ಕೆಲವು ಮನೆಯವರಿಗೆ ಕಡಿಮೆ ಇದೆ. ಆದ್ದರಿಂದ ಎಲ್ಲರಿಗೂ ಒಂದೇ ರೀತಿಯ ಮನೆ ತೆರಿಗೆ ನಿಯಮ ಮಾಡಬೇಕು ಎಂದು ಗ್ರಾಮಸ್ಥರು ಗ್ರಾ.ಪಂ. ಗೆ ಮನವಿಪತ್ರ ನೀಡಿದ ಹಾಗೂ ಜೂ.10ರೊಳಗೆ ಮಾಡದೇ ಇದ್ದಲ್ಲಿ , ಗ್ರಾ.ಪಂ. ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ ಘಟನೆ ಮೇ.29ರಂದು ನಡೆದ ಜಾಲ್ಸೂರು ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ವರದಿಯಾಗಿದೆ.


ಜಾಲ್ಸೂರು ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯು ಗ್ರಾ.ಪಂ. ಅಧ್ಯಕ್ಷ ಕೆ.ಎಂ‌. ಬಾಬು ಕದಿಕಡ್ಕ ಅವರ ಅಧ್ಯಕ್ಷತೆಯಲ್ಲಿ ಮೇ.29ರಂದು ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.
ಮನೆ ತೆರಿಗೆಯ ಪ್ರಮಾಣ ಕಡಿತಗೊಳಿಸಬೇಕು ಎಂದು ಅಡ್ಕಾರು ಭಾಗದ ಕೆಲವು ಗ್ರಾಮಸ್ಥರು ಗ್ರಾ.ಪಂ.ಗೆ ಮನವಿಯ ಮೂಲಕ ತಿಳಿಸಿದರು.
ಗ್ರಾಮಸ್ಥರ ಮನವಿ ಸ್ವೀಕರಿಸಿರುವ ಗ್ರಾ.ಪಂ. ಪಿ.ಡಿ.ಒ. ಹಾಗೂ ಆಡಳಿತ ಮಂಡಳಿಯವರು ಸೇರಿ ಚರ್ಚಿಸಿ ತೀರ್ಮಾನಕ್ಕೆ ಬರುವುದಾಗಿ ಪಿ.ಡಿ.ಒ. ಸುಬ್ಬಯ್ಯ ಅವರು ‘ಸುದ್ದಿ’ಗೆ ತಿಳಿಸಿದ್ದಾರೆ.


ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ನಿರ್ಮಾಣಗೊಂಡಿದ್ದ ಸೋಣಂಗೇರಿಯ ಪ್ರಯಾಣಿಕರ ಬಸ್ಸು ತಂಗುದಾಣವನ್ನು ರಸ್ತೆ ಅಗಲೀಕರಣ ಕಾಮಗಾರಿಯ ಸಂದರ್ಭದಲ್ಲಿ ತೆರವುಗೊಳಿಸಲಾಗಿದ್ದು, ಮತ್ತೆ ಅಲ್ಲಿ ಬಸ್ಸು ತಂಗುದಾಣ ನಿರ್ಮಾಣಕ್ಕಾಗಿ ಗ್ರಾ.ಪಂ. ವತಿಯಿಂದ ಸುಳ್ಯ ಲಯನ್ಸ್ ಕ್ಲಬ್ ಅವರಿಗೆ ಮನವಿ ಮಾಡುವ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು.


ಸಭೆಯಲ್ಲಿ ಪಿ.ಡಿ.ಒ. ಕೆ.ಪಿ. ಸುಬ್ಬಯ್ಯ, ಕಾರ್ಯದರ್ಶಿ ಸುಂದರ, ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ವಿನೋಬನಗರ, ಸದಸ್ಯರುಗಳಾದ ಅಬ್ದುಲ್ ಮಜೀದ್ ನಡುವಡ್ಕ, ಮುಜೀಬ್ ಪೈಚಾರು, ಶ್ರೀಮತಿ ಗೀತಾ ಅರ್ಭಡ್ಕ, ಶ್ರೀಮತಿ ಗೀತಾ ಗೋಪಿನಾಥ್ ಬೊಳುಬೈಲು, ಎನ್.ಎಂ. ಸತೀಶ ಕೆಮನಬಳ್ಳಿ, ಪಿ.ಆರ್. ಸಂದೀಪ್ ಕದಿಕಡ್ಕ, ಶ್ರೀಮತಿ ತಿರುಮಲೇಶ್ವರಿ ಮರಸಂಕ, ಶ್ರೀಮತಿ ದೀಪಾ ಅಜಕಳಮೂಲೆ, ಶ್ರೀಮತಿ ಅಂಬಿಕಾ ಕುಕ್ಕಂದೂರು, ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು, ಈಶ್ವರ ನಾಯ್ಕ ಕುಕ್ಕಂದೂರು, ಶ್ರೀಮತಿ ಸಂಧ್ಯಾ ವಾಗ್ಲೆ ಅಡ್ಕಾರು, ವಿಜಯ ಅಡ್ಕಾರು ಉಪಸ್ಥಿತರಿದ್ದರು.


ಮಾಜಿ ಗ್ರಾ.ಪಂ‌. ಉಪಾಧ್ಯಕ್ಷ ದಿನೇಶ್ ಅಡ್ಕಾರು, ಹಮೀದ್ ಅಡ್ಕಾರು, ಅಬ್ದುಲ್ ಲತೀಫ್ ಅಡ್ಕಾರು ಸೇರಿದಂತೆ ಅಡ್ಕಾರು ಭಾಗದ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.