ಇಂದು ಮೆಸ್ಕಾಂ ಜೂನಿಯರ್ ಇಂಜಿನಿಯರ್ ಬೋರಯ್ಯರಿಗೆ ಸೇವಾ ನಿವೃತ್ತಿ

0

ಸುಳ್ಯ‌ ಮೆಸ್ಕಾಂ ನಲ್ಲಿ ಜೂನಿಯರ್ ಇಂಜಿನಿಯರ್ ಆಗಿದ್ದ ಬೋರಯ್ಯರು ಮೇ.31 ರಂದು ನಿವೃತ್ತರಾಗಲಿದ್ದಾರೆ.

1984ರಲ್ಲಿ ಪುತ್ತೂರು ಮೆಸ್ಕಾಂ ಉಪವಿಭಾಗದಲ್ಲಿ ಮೇಲ್ಚಿಚಾರಕರಾಗಿ ಸರಕಾರಿ ಸೇವೆ ಆರಂಭಿಸಿದರು. 10 ವರ್ಷ ಅಲ್ಲಿ ಸೇವೆ ಸಲ್ಲಿಸಿದರು. ಅಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಪದೋನ್ನತಿಗೊಂಡ ಇವರು 1994 ರಲ್ಲಿ ಗುತ್ತಿಗಾರು ಮೆಸ್ಕಾಂ ಶಾಖೆಗೆ ವರ್ಗಾವಣೆಗೊಂಡರು.
2019 ರಲ್ಲಿ ಸುಳ್ಯ ಮೆಸ್ಕಾಂ ಗೆ ವರ್ಗಾವಣೆಗೊಂಡು ಬಂದರು.

ಪಿರಿಯಾಪಟ್ಟಣದವರಾದ ಬೋರಯ್ಯರು ಸುಳ್ಯದ ಜೂನಿಯರ್ ಕಾಲೇಜು ಬಳಿ ನಿವಾಸಿ.‌ ಪತ್ನಿ ಕಾಮಾಕ್ಷಿ ಗೃಹಿಣಿಯಾಗಿದ್ದಾರೆ.
ಪುತ್ರಿ ಶ್ವೇತಾ ಪಿರಿಯಾಪಟ್ಟಣದಲ್ಲಿ ವೈದ್ಯರಾಗಿದ್ದು, ಮಗ ಶ್ರೇಯಸ್ ಮೈಸೂರಿನಲ್ಲಿ ಇಂಜಿನಿಯರ್ ಆಗಿದ್ದಾರೆ.

ಮೇ.30 ರಂದು ಸುಳ್ಯದ ಸದರ್ನ್ ರೆಸಿಡೆನ್ಸಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.