ಸುಳ್ಯ ರೋಟರಾಕ್ಟ್ ಕ್ಲಬ್ ವತಿಯಿಂದ  ದಿ. ನವೀನ್ ಸಂಕೇಶ್ ರಿಗೆ ಶ್ರದ್ದಾಂಜಲಿ ಸಭೆ

0

ಸುಳ್ಯ ರೋಟರಾಕ್ಟ್ ಕ್ಲಬ್ ಸದಸ್ಯ ನವೀನ್ ಸಂಕೇಶ ರವರು ಮೇ.23ರಂದು ಆರಂತೋಡಿನಲ್ಲಿ ನಡೆದ ವಾಹನ ಅಪಘಾತದಲ್ಲಿ ವಿಧಿವಶರಾದ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ಶ್ರ ಸಭೆ ಇಂದು ರೋಟರಾಕ್ಟ್ ಕ್ಲಬ್ ಅಧ್ಯಕ್ಷ ರೋ. ಪುವೇಂದ್ರನ್ ಕೂಟೆಲು ರವರ ಅಧ್ಯಕ್ಷತೆಯಲ್ಲಿ ರೋಟರಿ ಸಮುದಾಯ ಭವನದಲ್ಲಿ ನಡೆಯಿತು.
ರೋಟರಾಕ್ಟ್ ಕ್ಲಬ್ ಮಾಜಿ ವಲಯಾಧ್ಯಕ್ಷ ಕೆ ಟಿ ಭಾಗೀಶ್, ರೋಟರಾಕ್ಟ್ ಕ್ಲಬ್ ಮಾಜಿ ಅಧ್ಯಕ್ಷ ಭವಾನಿಶಂಕರ್ ಕಲ್ಮಡ್ಕ ನುಡಿನಮನ ಸಲ್ಲಿಸಿದರು. ರೋಟರಾಕ್ಟ್ ಕ್ಲಬ್ ಸದಸ್ಯರಾದ ಮಾಜಿ ವಲಯಾಧ್ಯಕ್ಷ ಸುರೇಶ್ ಕಾಮತ್, ವಿಷ್ಣು ಪ್ರಸಾದ್ ಕೆದಿಲಾಯ, ಉಲ್ಲಾಸ್ ಮಾವಜಿ, ಪ್ರಮೋದ್ ಬೊಳ್ಳಾಜೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪ್ರಣೀತ್ ಕಣಕ್ಕೂರ್ ವಂದಿಸಿದರು.