ವಿನೋಬನಗರ: ವಿವೇಕಾನಂದ ವಿದ್ಯಾಸಂಸ್ಥೆಗಳ ನೂತನ ವರ್ಷದ ಪ್ರಾರಂಭೋತ್ಸವ

0

ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಗಳ ನೂತನ ವರ್ಷದ ಪ್ರಾರಂಭೊತ್ಸವನ್ನು ಮೇ.31ರಂದು ನಡೆಸಲಾಯಿತು.
ಶಾಲಾ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ಪುಷ್ಪಾರ್ಚನೆಯನ್ನು ಮಾಡಿ ಶಿಕ್ಷಕರು ಪ್ರಾರ್ಥನಾ ಮಂದಿರಕ್ಕೆ ಬರಮಾಡಿಕೊಂಡರು.

ಬಳಿಕ ವಿದ್ಯಾಸಂಸ್ಥೆಯ ಸಂಚಾಲಕ ಸುದಾಕರ ಕಾಮತ್ ಅವರು ದೀಪ ಬೆಳಗಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಗೌರವ ಸಲಹೆಗಾರರಾದ
ನ. ಸೀತಾರಾಮ ,ಆಡಳಿತ ಮಂಡಳಿ ಸದಸ್ಯ ಡಾ. ಗೋಪಾಲಕೃಷ್ಣ ಭಟ್ ಕಾಟೂರು , ಶಾಲಾಭಿವೃದ್ದಿ ಸಮೀತಿಯ ಅದ್ಯಕ್ಷೆ ಶ್ರೀಮತಿ‌ ಸೌಮ್ಯ ಕದಿಕಡ್ಕ ,ಉಪಾಧ್ಯಕ್ಷ ರವಿರಾಜ್ ಗಬ್ಬಲಡ್ಕ , ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ.ಪ್ರೌಢ ಶಾಲಾ ಮುಖ್ಯೋಪಾದ್ಯಾಯ ಗಿರಿಶ್ ಕುಮಾರ್ ಹಾಗೂ ಶಾಲಾಭಿವೃದ್ದಿ ಸಮಿತಿಯ ಸದಸ್ಯರುಗಳು, ಪೋಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.