ಗುತ್ತಿಗಾರು ಮಾ.ಹಿ.ಪ್ರಾ.ಶಾಲಾ ಪ್ರಾರಂಭೋತ್ಸವ

0

ಗುತ್ತಿಗಾರು ಮಾ.ಹಿ.ಪ್ರಾ.ಶಾಲಾ ಪ್ರಾರಂಭೋತ್ಸವ ಇಂದು ನಡೆಯಿತು. ಆರಂಭದಲ್ಲಿ ಗುತ್ತಿಗಾರು ಪೇಟೆಯ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿ ಶಾಲಾ ಮುಖ್ಯ ದ್ವಾರದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಕೆ ಮಾಡಲಾಯಿತು. ಮಕ್ಕಳನ್ನು ಆರತಿ ಬೆಳಗಿ ಹೂವನ್ನು ನೀಡಿ ಶಾಲೆಗೆ ಶಿಕ್ಷಕಿಯರು ಸ್ವಾಗತಿಸಿದರು.


ಬಳಿಕ ಸಭಾ ಕಾರ್ಯಕ್ರಮ ನಡೆದಿದ್ದು ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ವಹಿಸಿದ್ದರು.
ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ರೇವತಿ ಆಚಳ್ಳಿ ದೀಪ ಪ್ರಜ್ವಲನೆ ಮಾಡಿದರು. ಗುತ್ತಿಗಾರು ಗ್ರಾ.ಪಂ ಸದಸ್ಯರಾದ ಜಗದೀಶ್ ಬಾಕಿಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದಯಾನಂದ ಮುತ್ಲಾಜೆ ವೇದಿಕೆಯಲ್ಲಿದ್ದರು.

ಶಿಕ್ಷಕ ಶಶಿಧರ್ ಮಾವಿನಕಟ್ಟೆ ಪ್ರಾಸ್ಥಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ಸಹ ಶಿಕ್ಷಕ ಲೋಕೇಶ್ ವಂದಿಸಿದರು.