ಸುಳ್ಯ ಗ್ರೀನ್ ವ್ಯೂ ಶಾಲೆಯಲ್ಲಿ ಪ್ರಾರಂಭೋತ್ಸವದ ಸಂಭ್ರಮ

0


ಗ್ರೀನ್ ವ್ಯೂ ಆಂಗ್ಲ ಮಾದ್ಯಮ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಪ್ರಾರಂಬೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ತಳಿರು ತೋರಣಗಳಿಂದ ಶಾಲೆಯನ್ನು ಅಲಂಕಾರ ಮಾಡಲಾಗಿತ್ತು.


ಆಡಳಿತ ಮಂಡಳಿ ಸದಸ್ಯರು ,ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳ ಜೊತೆ ಶಾಲೆಯಿಂದ ನಾವೂರು ಜಂಕ್ಷಣ್ ವರೆಗೆ ರಸ್ತೆಯಲ್ಲಿ ಹೆಜ್ಹೆ ಹಾಕಿದರು.ಬ್ಯಾಂಡ್ ನ ನಿನಾದ ಮಕ್ಕಳಲ್ಲಿ ಹೊಸ ಹುರುಪು ಮೂಡಿಸಿತ್ತು.ಶಾಲಾ ಆಡಳಿತ ಮಂಡಳಿ ಅದ್ಯಕ್ಷರಾದ ಹಾಜಿ ಕೆ.ಎಮ್ ಮಜೀದ್ ಡೋಲು ಬಡಿದು ಕಾರ್ಯಕ್ರಮ ಉದ್ಘಾಟಿಸಿದರು.


ಪ್ರಧಾನ ಕಾರ್ಯದರ್ಶಿ ಜನಾಬ್ ಲತೀಫ್ ಹರ್ಲಡ್ಕ ಶುಭ ಹಾರೈಸಿದರು.
ಪಿಟಿಎ ಅದ್ಯಕ್ಷರಾದ ಜನಾಬ್ ಎನ್.ಎ.ಅಬ್ದುಲ್ಲ ಮತ್ತು ಆಡಳಿತ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾದ್ಯಾಯರು ಮಕ್ಕಳಿಗೆ ಹಿತೋಪದೇಶ ನೀಡಿದರು.
ಶಿಕ್ಷಕರಾದ ಮಂಜುನಾಥ ಸ್ವಾಗತಿಸಿದರು ಕೊನೆಯಲ್ಲಿ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು