ಯಾರಿಗೆಲ್ಲಾ ಸುಖವಾಗಿ ನಿದ್ದೆ ಮಾಡಬೇಕೆಂದು ಬಯಕೆ ಇರುವುದಿಲ್ಲ ಹೇಳಿ? … ಮನುಷ್ಯ ಆರೋಗ್ಯದಿಂದ ಇರಬೇಕಾದರೆ ನಿದ್ದೆಯೂ ಅಷ್ಟೇ ಪ್ರಾಮುಖ್ಯತೆ ಪಡೆದಿದೆ.
ಎಷ್ಟು ಹೊತ್ತು ನಿದ್ದೆ ಮಾಡಬೇಕು ಅನ್ನುವುದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಎಳೇ ಮಗು ದಿನಕ್ಕೆ 16ರಿಂದ 18 ಗಂಟೆ ನಿದ್ದೆ ಮಾಡಿದರೆ, 1ರಿಂದ 3 ವರ್ಷದ ಮಗು 14 ಗಂಟೆ ನಿದ್ದೆ ಮಾಡುತ್ತದೆ. 3ರಿಂದ 5 ವರ್ಷದ ಮಗು 11 ಅಥವಾ 12 ಗಂಟೆ ನಿದ್ದೆ ಮಾಡಬೇಕು. 6ರಿಂದ 12 ವರ್ಷದ ಮಕ್ಕಳು 10 ಗಂಟೆ, ಹದಿವಯಸ್ಕರು 9 ರಿಂದ 10 ಗಂಟೆ ಹಾಗೂ ವಯಸ್ಕರು 7 ರಿಂದ 8 ಗಂಟೆ ನಿದ್ದೆ ಮಾಡಬೇಕು.
ನಿದ್ದೆಯನ್ನು ಕಡೆಗಣಿಸಬಾರದು. ಎಲ್ಲರೂ ಸಾಕಷ್ಟು ನಿದ್ದೆ ಮಾಡಬೇಕು.
ನಿದ್ದೆಯಿಂದ ಏನು ಪ್ರಯೋಜನ?
ಮಕ್ಕಳಲ್ಲಿ ಮತ್ತು ಹದಿಪ್ರಾಯದವರಲ್ಲಿ ಬೆಳವಣಿಗೆಯಾಗುತ್ತದೆ.
ಹೊಸ ವಿಷಯಗಳನ್ನು ಕಲಿಯಲು ಮತ್ತು ಅವನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಸಹಾಯವಾಗುತ್ತದೆ.
ದೇಹದ ಬೆಳವಣಿಗೆ ಮತ್ತು ತೂಕವನ್ನು ಸಮತೋಲನದಲ್ಲಿಡುವ ಹಾರ್ಮೋನುಗಳ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.















ಹೃದಯ ಮತ್ತು ರಕ್ತ ನಾಳಗಳು ಸರಿಯಾಗಿ ಕೆಲಸ ಮಾಡುತ್ತವೆ.
ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆಯಾಗುತ್ತದೆ.
ಸಾಕಷ್ಟು ನಿದ್ದೆ ಮಾಡದಿದ್ದರೆ ದೇಹದ ತೂಕ ಹೆಚ್ಚಾಗುತ್ತದೆ, ಖಿನ್ನತೆ, ಹೃದ್ರೋಗ, ಸಕ್ಕರೆ ಕಾಯಿಲೆ, ಮತ್ತು ಭೀಕರ ಅಪಘಾತ ನಡೆಯುವ ಸಾಧ್ಯತೆಯಿದೆ. ಈ ಎಲ್ಲ ಅಪಾಯಗಳಿಂದ ದೂರವಿರಲು ಸಾಕಷ್ಟು ನಿದ್ದೆ ಮಾಡಲೇಬೇಕು.
ಒಂದೊಂದು ದಿನ ಒಂದೊಂದು ಸಮಯಕ್ಕೆ ಮಲಗುವುದು, ಏಳುವುದು ಮಾಡಬಾರದು.
ನಿಮ್ಮ ಮಲಗುವ ಕೋಣೆಯಲ್ಲಿ ಕತ್ತಲಿರುವಂತೆ, ಶಬ್ದವಿಲ್ಲದೆ ಶಾಂತಿಯಿರುವಂತೆ ಮತ್ತು ತೀರಾ ಸೆಕೆಯೂ ತೀರಾ ಚಳಿಯೂ ಇಲ್ಲದಂತೆ ನೋಡಿಕೊಳ್ಳಿ.
ಮಲಗಿರುವಾಗ ಮೊಬೈಲ್ ಉಪಯೋಗಿಸಬೇಡಿ ಅಥವಾ ಟಿ.ವಿ. ನೋಡಬೇಡಿ.
ನಿಮ್ಮ ಹಾಸಿಗೆಯನ್ನು ನಿಮಗೆ ಹೇಗೆ ಬೇಕೋ ಹಾಗೆ ಸಿದ್ಧಪಡಿಸಿಕೊಳ್ಳಿ.
ಮಲಗುವ ಸಮಯದಲ್ಲಿ ಕಾಫಿ, ಟೀ, ಮದ್ಯ ಸೇವನೆ ಅಥವಾ ಅತಿಯಾದ ಆಹಾರ ಸೇವನೆ ಬೇಡ.
ಈ ಸಲಹೆಗಳನ್ನು ಅನ್ವಯಿಸಿದ ಮೇಲೂ ನಿಮಗೆ ಇನ್ನೂ ನಿದ್ದೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ,ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ…..









