ಸುಳ್ಯ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಎ.ಇ.ಇ. ಆಗಿ ಭರತ್ ಬಿ.ಎಂ.

0

ಸುಳ್ಯ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಭರತ್ ಬಿ.ಎಂ. ರವರು ಪ್ರಭಾರ ವಹಿಸಿಕೊಂಡಿದ್ದಾರೆ.
ಪುತ್ತೂರು ಜಿ.ಪಂ. ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿರುವ ಭರತ್ ಬಿ.ಎಂ.ರವರು ೨೦೧೬ರಲ್ಲಿ ಎ.ಇ. ಆಗಿ ಸರಕಾರಿ ಹುದ್ದೆಗೆ ನೇಮಕಗೊಂಡು ಚಿಕ್ಕಮಗಳೂರು ಕಡೂರು ತಾಲೂಕಿನಲ್ಲಿ ಸೇವೆ ಆರಂಭಿಸಿದರು. ೨೦೨೦ರಲ್ಲಿ ಎ.ಇ.ಇ. ಆಗಿ ಪದೋನ್ನತಿಗೊಂಡು ಪುತ್ತೂರು ಜಿ.ಪಂ. ಉಪವಿಭಾಗಕ್ಕೆ ವರ್ಗಾವಣೆಗೊಂಡು ಬಂದರು.
ಸುಳ್ಯ ಎಇಇ ಆಗಿದ್ದ ಹನುಮಂತರಾಯಪ್ಪರು ಮೇ.೩೧ರಂದು ನಿವೃತ್ತರಾಗಿರುವುದರಿಂದ ಸುಳ್ಯದ ಪ್ರಭಾರವನ್ನು ಭರತ್‌ರಿಗೆ ವಹಿಸಲಾಗಿದೆ. ಇವರು ಎಡಮಂಗಲ ಗ್ರಾಮದ ಬಳಕಬೆಯವರು.