ಪೂದೆ ದೇವಸ್ಥಾನಕ್ಕೆ ಡಾ. ನಿಂಗಯ್ಯ ಭೇಟಿ

0

ಮುರುಳ್ಯ ಗ್ರಾಮದ ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ ಮತ್ತು ಶ್ರೀ ಮಹಾವಿಷ್ಣು ದೇವಸ್ಥಾನಗಳನ್ನು ಸುಬ್ರಮಣ್ಯ ದೇವಸ್ಥಾನ ದತ್ತು ಪಡೆದು ನಾಲ್ಕು ವರ್ಷಗಳ ಹಿಂದೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜೀರ್ಣೋದ್ಧಾರ ಕೈಗೊಂಡಿತ್ತು.

ದೇವಸ್ಥಾನದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ದೇವಸ್ಥಾನದ ಸಮಿತಿ ಪುನಃ ಮನವಿ ಸಲ್ಲಿಸಿದ ಮೇರೆಗೆ ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ಕಿರಿಯ ಅಭಿಯಂತರರಾದ ಉದಯಕುಮಾರ್, ಗುತ್ತಿಗೆದಾರ ಉಪ್ಪoಗಳ ರಘುರಾಮ ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊರೋನಾ ಕಾಲಘಟ್ಟದಲ್ಲಿ ಕೆಲಸ ಕಾರ್ಯಗಳು ನಿಧನವಾಗಿದ್ದು, ತಕ್ಷಣ ಕೆಲಸಗಳು ಮುಂದುವರೆಯಲಿ ಎಂದು ಡಾಕ್ಟರ್ ನಿಂಗಯ್ಯ ಆದೇಶಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿ ಅಧ್ಯಕ್ಷ ಭುವನೇಶ್ವರ ಪೂದೆ, ಪುಟ್ಟಣ್ಣ ಆಚಾರ್ಯ ಪೂದೆ, ದೇವಸ್ಥಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.