ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಎಲಿಮಲೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

0

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ನವದೆಹಲಿ ಇದರ ಆಶ್ರಯದಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು ಇವರು ಎಂಟನೇ ತರಗತಿಯ ವಿದ್ಯಾರ್ಥಿ ಗಳಿಗೆ ನಡೆಸಿದ 2022-23ನೇ ಸಾಲಿನ ರಾಜ್ಯ ಮಟ್ಟದ ಎನ್ ಎಂಎಂಎಸ್ ಪರೀಕ್ಷೆಯಲ್ಲಿ ಎಲಿಮಲೆಯ ಶಾಲೆಯ 6 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ನಾಲ್ಕೂರು ಗ್ರಾಮದ ಉತ್ರಂಬೆ ಪ್ರೇಮಕುಮಾರ ಮತ್ತು ಕವಿತಾ ದಂಪತಿಗಳ ಪುತ್ರಿ ಪೂಜಾಶ್ರೀ, ನಾಲ್ಕೂರು ಗ್ರಾಮದ ಚಾರ್ಮತ ಧರ್ಮಪಾಲ ಡಿ.ಕೆ. ಮತ್ತು ಕಿಶೋರಿ ಡಿ. ಇವರ ಪುತ್ರಿ ಕೀರ್ತನಾ ಡಿ., ಮಡಪ್ಪಾಡಿ ಗ್ರಾಮದ ಪಾರೆಮಜಲು ಸೋಮಶೇಖರ ಮತ್ತು ಯಶೋದಾ ಪಿ.ಎಸ್. ದಂಪತಿಗಳ ಪುತ್ರ ಗೀತೇಶ್ ಪಿ.ಎಸ್., ಮರ್ಕಂಜ ಗ್ರಾಮದ ಶೆಟ್ಟಿಮಜಲು ಪುಟ್ಟರಾಜು ಮತ್ತು ನಾಗವೇಣಿ ದಂಪತಿಗಳ ಪುತ್ರಿ ಹಂಸಿಕಾ ಪಿ.ಎಸ್., ದೇವಚಳ್ಳ ಗ್ರಾಮದ ಕಲ್ಲುಪಣೆ ದಿ| ಆನಂದ ಪ್ರಭು ಮತ್ತು ಸಂದ್ಯಾ ದಂಪತಿಗಳ ಪುತ್ರ ಚೇತನ್ ಪ್ರಭು ಕೆ., ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿ ಸುಂದರ ಮತ್ತು ಸುಮತಿ ದಂಪತಿಗಳ ಪುತ್ರಿ ಕಲ್ಪನಾ ಆಯ್ಕೆಯಾಗಿದ್ದಾರೆ.