ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ವಿಶ್ವ ಪರಿಸರ ದಿನಾಚರಣೆ

0

ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್, ನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು
ಜೂ. 05 ಆಚರಿಸಲಾಯಿತು. ಶಾಲಾ ಅಸೆಂಬ್ಲಿಯಲ್ಲಿ ಪರಿಸರ ಗೀತೆ ಹಾಡಿ, ಪರಿಸರ ಸಂರಕ್ಷಣಾ ಪ್ರತಿಜ್ಞೆಯನ್ನು ಕೈಗೊಂಡರು. ಬಳಿಕ ಸಭಾ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಅನಿಲ್ ಬಳಂಜರವರು ಮಾತನಾಡಿ, ಪ್ರಾಣಿಗಳು ಮನುಷ್ಯನಿಗೆ ತೊಂದರೆ ನೀಡುತ್ತಿರುವುದು ಕಾಡಿನಲ್ಲಿ ಆಹಾರದ ಕೊರತೆಯಿಂದ. ರಸ್ತೆ ಬದಿಯಲ್ಲಿ ಅಲಂಕಾರಿಕ ಗಿಡಗಳ ನಾಟಿಯಿಂದ ಪ್ರಾಣಿಗಳಿಗೆ ಆಹಾರದ ಕೊರತೆಯಾಗಿದೆ. ಅದಕ್ಕಾಗಿ ಹಣ್ಣು ಬಿಡುವ, ಹಣ್ಣು ಕೊಡುವ ಗಿಡಗಳನ್ನು ನೆಡಬೇಕು. ಪ್ರತಿದಿನ ಪರಿಸರ ದಿನವಾಗಬೇಕು. ಪ್ಲಾಸ್ಟಿಕ್ ನಿರ್ಮೂಲನವಾಗಬೇಕು. ಪ್ರಕೃತಿ ಉಳಿಸಿದರೆ ಮಾತ್ರ ಬದುಕು ಹಸನಾಗುತ್ತದೆ. ಪ್ರಕೃತಿ ಚರವಾಗಿರಬೇಕು ಎಂದು ಹೇಳಿದರು.

ಶಾಲಾ ಪ್ರಾಂಶುಪಾಲರಾದ ಕು. ಟಿ.ಎಂ. ದೇಚಮ್ಮ ಮಾತನಾಡಿ, ಎಳವೆಯಲ್ಲೇ ಮಕ್ಕಳು ಪ್ರಕೃತಿ ಪ್ರಿಯರಾಗಬೇಕು, ನಾವು ತಂದೆ ತಾಯಿಯರಿಂದ ಗಿಡ ಕಶಿ ಮಾಡುವ ವಿಧಾನ ಕಲಿತೆವು, ಸಿಕ್ಕಸಿಕ್ಕಲ್ಲಿ ಪ್ಲಾಸ್ಟಿಕ್ ಎಸೆಯಬಾರದು, ಎಂಬೆಲ್ಲಾ ವಿಚಾರಗಳನ್ನು ಉದಾಹರಣೆ ಸಹಿತ ವಿವರಿಸಿದರು. ಶಾಲಾ ಶಿಕ್ಷಕಿ ಉಷಾಲತಾ ಪರಿಸರದ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಸಮೂಹ ಗೀತೆಯನ್ನು ಹಾಡಿದರು. ವಿದ್ಯಾರ್ಥಿನಿ ಕು. ಗಾನವಿ ಪರಿಸರ ದಿನದ ಬಗ್ಗೆ ಕಿರು ಭಾಷಣ ಮಾಡಿದರು. ಶಾಲಾ ವಿದ್ಯಾರ್ಥಿ ಮಾ. ದೇವಲ್ ಸ್ವಾಗತಿಸಿ, ಕು. ಊರ್ವಿಮಾನ್ಯ ವಂದಿಸಿದರು. ಕು.ಸ್ತುತಿ ಕಾರ್ಯಕ್ರಮವ ನಿರೂಪಿಸಿದರು.


ವಿಶ್ವ ಪರಿಸರ ದಿನದ ಅಂಗವಾಗಿ ಶಾಲೆಯ ಪ್ರತಿ ಮಗುವಿಗೆ ಹಾಗೂ ಸಿಬ್ಬಂದಿಗಳಿಗೆ ಸಸಿ ವಿತರಿಸಲಾಯಿತು.