ಸುಳ್ಯ :ಕರ್ನಾಟಕ ಮುಸ್ಲಿಂ ಜಮಾಅತ್ ವತಿಯಿಂದ ಹಜ್ಜ್ ಯಾತ್ರಿಕರಿಗೆ ಬೀಳ್ಕೊಡುಗೆ

0

ಕರ್ನಾಟಕ ಮುಸ್ಲಿಂ ಜಮಾ ಹತ್ (ಕೆ ಎಂ ಜೆ) ಸುಳ್ಯ ಝೋನ್ ಕಮಿಟಿ ವತಿಯಿಂದ ಜೂನ್ 5ರಂದು ಗಾಂಧಿನಗರ ಸುನ್ನಿ ಸೆಂಟರ್ ನಲ್ಲಿ ಸುಳ್ಯ ತಾಲೂಕು ವ್ಯಾಪ್ತಿಯ ಹಜ್ಜ್ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ಕೆಎಂಜೆ ಸುಳ್ಯ ಸರ್ಕಲ್ ಸಮಿತಿಯ ಕೋಶಾಧಿಕಾರಿ ಮೊಹಮ್ಮದ್ ಕುಂಞಿ ಗೂನಡ್ಕ ನೆರವೇರಿಸಿದರು.
ಸಂಘಟನೆಯ ಮುಖಂಡರಾದ ಅಬ್ದುಲ್ಲಾಹಿ ಸಅದಿ ಅಜ್ಜಾವರ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಹಜ್ ಯಾತ್ರಿಕರ ಪೈಕಿ ಸುಳ್ಯ ತಾಲೂಕು ಸುನ್ನಿ ಮಹಲ್ ಫೆಡರೇಶನ್ ಅಧ್ಯಕ್ಷ ಇಬ್ರಾಹಿಂ ಹಾಜಿ ಕತ್ತರ್,ಹಿರಿಯರಾದ ಅಬ್ದುಲ್ಲಾ ಮಾಸ್ಟರ್ ಮಾತನಾಡಿ ಶುಭ ಹಾರೈಸಿದರು.


ಝೋನಲ್ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಕಾರ್ಯದರ್ಶಿ ಹನೀಫ್ ಹಾಜಿ ಇಂದ್ರಾಜೆ, ಎಸ್ಎಂಎ ಬೆಳ್ಳಾರೆ ಜೋನಲ್ ಅಧ್ಯಕ್ಷ ಹಾಜಿ ಇಬ್ರಾಹಿಂ ಬೀಡು, ಎಸ್ ವೈ ಎಸ್ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಸಿದ್ದೀಕ್ ಕಟ್ಟೆಕ್ಕಾರ್ಸ್, ಮುಖಂಡರುಗಳಾದ ಅಡ್ವಕೇಟ್ ಮೂಸಾ ಕುಂಞಿ ಪೈಂಬೆಚ್ಚಾಲು,ಹಸ್ಸನ್ ಸಕಾಫಿ ಬೆಳ್ಳಾರೆ,ಹಾಜಿ ಇಬ್ರಾಹಿಂ ಕೊಯಂಗಿ,ಅಬ್ದುಲ್ ಜಬ್ಬಾರ್ ಸಕಾಫಿ,ಸ್ವಭಾಹ್ ಹಿಮಮಿ ಬೀಜಕೊಚ್ಚಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಮಿತಿ ಕೋಶಾಧಿಕಾರಿ ಅಬ್ದುಲ್ ಹಮೀದ್ ಸುಣ್ಣಮೂಲೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎಸ್ ಎಸ್ ಎಫ್ ಸಂಘಟನೆಯ ಮುಖಂಡರುಗಳಾದ ಸಿದ್ದೀಕ್ ಗೂನಡ್ಕ, ನೌಶಾದ್ ಕೆರೆಮೂಲೆ ಸಹಕರಿಸಿದರು.