ಅಮರ ಸಂಘಟನಾ ಸಮಿತಿ ವತಿಯಿಂದ ಬೆಳ್ಳಾರೆ ಪೋಲಿಸ್ ಠಾಣಾ ವಠಾರದಲ್ಲಿವಿಶ್ವ ಪರಿಸರ ದಿನಾಚರಣೆ

0

ಸುಳ್ಯ ಅಮರ ಸಂಘಟನಾ ಸಮಿತಿಮತ್ತು ಅರಕ್ಷಕ ಠಾಣೆ ಬೆಳ್ಳಾರೆ ಇದರ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಯನ್ನು ಅರಕ್ಷಕ ಠಾಣೆಯ ವಠಾರದಲ್ಲಿ ಗಿಡ ನೆಡುವುದರ ಮೂಲಕ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಬೆಳ್ಳಾರೆ ಪೋಲಿಸ್ ಠಾಣೆಯ ಉಪ ನಿರೀಕ್ಷಕ ಸುಹಾಸ್ ಆರ್,ಕ್ರೈಂ ಎಸ್.ಐ ಶಿವಕುಮಾರ್, ಅಮರ ಸಂಘಟನಾ ಸಮಿತಿ ಅಧ್ಯಕ್ಷ ಪ್ರವಿಣ್ ಕುಲಾಲ್ ಪೈಲಾರು ಮತ್ತು ಸಂಘಟನೆಯ ಸದಸ್ಯರು ಹಾಗೂ ಠಾಣೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕನಕಮಜಲು ರಕ್ಷಿತಾರಣ್ಯ ವಿಭಾಗದ ವತಿಯಿಂದ ಗಿಡಗಳನ್ನು ಉಚಿತವಾಗಿ ನೀಡಿದರು.