ಗುತ್ತಿಗಾರಿನಲ್ಲಿ ವಿಶ್ವ ಪರಿಸರ ದಿನಾಚರಣೆ

0

ನೆಹರು ಯುವ ಕೇಂದ್ರ ಮಂಗಳೂರು,ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ, ಸರಕಾರಿ ಪದವಿಪೂರ್ವ ವಿದ್ಯಾಲಯ ಗುತ್ತಿಗಾರು,ಆದರ್ಶ ಯೂತ್ ಕ್ಲಬ್(ರಿ.) ಹಾಲೆಮಜಲು, ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ.) ಗುತ್ತಿಗಾರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸರಕಾರಿ ಪದವಿಪೂರ್ವ ವಿದ್ಯಾಲಯ ಗುತ್ತಿಗಾರಿನಲ್ಲಿ ಆಚರಿಸಲಾಯಿತು.

ಹಿರಿಯ ನಾಟಿ ವೈದ್ಯೆ ಶ್ರೀಮತಿ ಪುಷ್ಪಾವತಿ ಬುಡ್ಲೆಗುತ್ತು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ “ಅಮೂಲ್ಯ ವೃಕ್ಷ ಸಂಪತ್ತಿನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವುದು ನಮ್ಮ ಇಂದಿನ ಆದ್ಯತೆಯಾಗಬೇಕು” ಎಂದು ಅವರು ಹೇಳಿದರು.

ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇವತಿ ಆಚಳ್ಳಿ, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ.ಹೆಚ್.ಪಿ, ನಿಧಿ ಹೋಂ ಪ್ರೊಡಕ್ಟ್ಸ್ ನ ವ್ಯವಸ್ಥಾಪಕ ನಿರ್ದೇಶಕರಾದ ರಾಧಾಕೃಷ್ಣ ಇಟ್ಟಿಗುಂಡಿ, ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ತೇಜಸ್ವಿ ಕಡಪಳ, ಕೋಶಾಧಿಕಾರಿ ಮುರಳಿ ನಳಿಯಾರು, ಉಪಾಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ, ನಿರ್ದೇಶಕರಾದ ದಿನೇಶ್ ಹಾಲೆಮಜಲು, ಸತೀಶ್ ಮೂಕಮಲೆ,ಪೂರ್ವಾಧ್ಯಕ್ಷ ಶಿವಪ್ರಕಾಶ್ ಕಡಪಳ, ಆದರ್ಶ ಯೂತ್ ಕ್ಲಬ್ ನ ಅಧ್ಯಕ್ಷರಾದ ಸತೀಶ್ ಬಂಬುಳಿ,

ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.