ಸರಕಾರಿ ಪ್ರೌಢಶಾಲೆ ಎಲಿಮಲೆ ಮರು ಮೌಲ್ಯಮಾಪನ ಬಳಿಕ ಶೇಕಡ 96.4 ಫಲಿತಾಂಶ

0

2022-23ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನ ಫಲಿತಾಂಶ ಹೊರಬಿದ್ದಿದ್ದು, ಅನುತ್ತೀರ್ಣಗೊಂಡವರಲ್ಲಿ ಇಬ್ಬರು ಉತ್ತೀರ್ಣರಾಗಿ ಸರಕಾರಿ ಪ್ರೌಢಶಾಲೆ ಎಲಿಮಲೆ ಶೇಕಡ 96.4 ಫಲಿತಾಂಶ ಪಡೆದುಕೊಂಡಿದೆ.

ಪರೀಕ್ಷೆ ಬರೆದ 55 ವಿದ್ಯಾರ್ಥಿಗಳಲ್ಲಿ 53 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 8 ಡಿಸ್ಟಿಂಕ್ಷನ್ 33 ಪ್ರಥಮ ಶ್ರೇಣಿ ಮತ್ತು 12 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕೀರ್ತನ್ ಡಿ 601, ಕೃತಿ ಎ 596, ರಾಧಿಕಾ ವೈ 591, ದಿಶಾ ಕೆ ಟಿ 561, ಕಾರ್ತಿಕ್ ಬಿ 547, ಯಶ್ವಿತಾ ಕೆ 547, ಫಾತಿಮತ್ ಸನ 546,ಶ್ರಾವ್ಯ ಶ್ರೀ ಎಸ್ 546 ಅಂಕಗಳನ್ನು ಗಳಿಸಿದ್ದಾರೆ.