ಬೆಳ್ಳಾರೆ: ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ‘ನಮ್ಮ ನಡಿಗೆ ಸ್ವಚ್ಛತೆಯೆಡೆಗೆ’ ಜಾಗೃತಿ ಆಂದೋಲನ

0

ವಿಶ್ವ ಪರಿಸರ ದಿನದ ಅಂಗವಾಗಿ ನಮ್ಮ ನಡಿಗೆ ಸ್ವಚ್ಛತೆಯೆಡೆಗೆ ಎಂಬ ಜಾಗ್ರತಿ ಆಂದೋಲನವನ್ನು ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ಜೂ‌ 8ರಂದು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳನ್ನು ನಾಲ್ಕು ತಂಡಗಳನ್ನಾಗಿ ರಚಿಸಲಾಯಿತು.


ಮೊದಲನೆಯ ತಂಡವು ಪೆರುವಾಜೆ ಜಲದುರ್ಗ ದೇವಾಲಯದಿಂದ ಬೆಳ್ಳಾರೆ ಸರಕಾರಿ ಬಸ್ ನಿಲ್ದಾಣದವರೆಗೆ, ಎರಡನೇ ತಂಡವು ಜಲದುರ್ಗ ವುಡ್ ಇಂಡಸ್ಟ್ರೀಯಿಂದ ಪಂಚಾಯಿತ್ ಆವರಣವನ್ನು ಸೇರಿಸಿ ಅಜಪಿಲ ದೇವಾಲಯದ ಆವರಣದವರೆಗೂ, ಮೂರನೆಯ ತಂಡವು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆಯಿಂದ ವೆಂಕ್ರಟಮಣ ದೇವಾಲಯದ ವರೆಗೂ, ನಾಲ್ಕನೆಯ ತಂಡವು ಗೌರಿ ಹೊಳೆಯವರೆಗೂ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.

ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಾಲಾ ಆವರಣದ ಸುತ್ತ ಮುತ್ತ ಸ್ವಚ್ಛಗೊಳಿಸಿದರು. ವಿದ್ಯಾರ್ಥಿಗಳಿಗೆ ಕೈಗವಸುಗಳನ್ನು ಮತ್ತು ಮುಖ ಗವಸುಗಳನ್ನು ನೀಡಲಾಯಿತು. ನಂತರ ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ಕಸವಿಲೇವಾರಿ ನಡೆಸಲಾಯಿತು. ಶಾಲಾ ಪ್ರಾಂಶುಪಾಲರು ಮತ್ತು ಶಿಕ್ಷಕರು ಈ ಆಂದೋಲನದಲ್ಲಿ ಕೈ ಜೋಡಿಸಿದರು.