ಅಡ್ಕಾರ್ ಅಂಜನಾದ್ರಿ ಕ್ಷೇತ್ರದಲ್ಲಿ ಮನೆ ಮನೆ ಯಕ್ಷಗಾನ ತಿರುಗಾಟ ಮೇಳಕ್ಕೆ ಚಾಲನೆ

0

ಸುಳ್ಯದ ಯುವಕ ಯಕ್ಷಗಾನ ಕಲಾರಂಗ ಇದರ ವತಿಯಿಂದ 6ನೇ ವರುಷದ ಮನೆ ಮನೆ ಯಕ್ಷಗಾನ ತಿರುಗಾಟ ಮೇಳಕ್ಕೆ ಅಡ್ಕಾರ್ ಅಂಜನಾದ್ರಿ ಕ್ಷೇತ್ರದಲ್ಲಿ ಬ್ರ. ವೇ. ಮೂ|ಪುರೋಹಿತ್ ನಾಗರಾಜ ಭಟ್ ರವರು ಜೂ.10 ರಂದು ಚಾಲನೆ ನೀಡಿದರು.


ಯಕ್ಷಗಾನ ಕಲಾವಿದ ಸಂಯೋಜಕ ಶೇಖರ ಮಣಿಯಾಣಿ ಯವರ ನೇತೃತ್ವದಲ್ಲಿ ತೆಂಕು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಮನೆ ಮನೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಲಾಗುವುದು.


ದಿನವೊಂದಕ್ಕೆ ಪರಿಸರದಲ್ಲಿ ಇರುವ ಕನಿಷ್ಠ 8 ಮನೆಗಳಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿರುವುದು. ಈ ಸಂದರ್ಭದಲ್ಲಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಪ್ರತಿ ಮನೆಯ ಸದಸ್ಯರು ಸಹಕಾರ ನೀಡುವಂತೆ ಸಂಘಟಕರು ವಿನಂತಿಸಿದರು.