ಕುಕ್ಕುಜಡ್ಕದಲ್ಲಿ ಶಕ್ತಿ ಯೋಜನೆಗೆ ಚಾಲನೆ- ಕಾಂಗ್ರೆಸ್ ಕಾರ್ಯರ್ತರಿಂದ ಸಿಹಿ ಹಂಚಿ ಸಂಭ್ರಮಾಚರಣೆ

0

ಅಮರಮೂಡ್ನೂರು ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಜೂ.12 ರಂದು ಕುಕ್ಕುಜಡ್ಕದ ಜಂಕ್ಷನ್ ಬಳಿ ಸರಕಾರ ಘೋಷಿಸಿದ ಶಕ್ತಿಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸಂಭ್ರಮಾಚರಣೆಯನ್ನು
ಬೆಳಗ್ಗಿನ ಬಸ್ ಪ್ರಯಾಣಿಕರಿಗೆ ಸಿಹಿತಿಂಡಿ ಹಂಚಿ ಮಾಡಲಾಯಿತು.


ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಯಪ್ರಕಾಶ್ ರೈ, ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಚೂಂತಾರು, ವೆಂಕಟ್ರಮಣ ಇಟ್ಟಿಗುಂಡಿ, ಮೀನಾಕ್ಷಿ ಚೂಂತಾರು, ಗ್ರಾಮ ಸಮಿತಿ ಅಧ್ಯಕ್ಷ ರಾಮಯ್ಯ ರೈ ಕಜೆಮೂಲೆ, ಅಣ್ಣಾಜಿ ಗೌಡ ಪೈಲೂರು, ಚೇತನ ಚಿಲ್ಪಾರು, ಪವನ್ ಮುಂಡ್ರಾಜೆ, ಜಯರಾಮ ಬೊಳ್ಕೊಡಿ, ತಿರುಮಲೇಶ್ವರ ಗೌಡ ಬೊಳ್ಳೂರು ಮತ್ತಿತರರು ಉಪಸ್ಥಿತರಿದ್ದರು.