ಕಲ್ಲುಗುಂಡಿ : ಹಂಚು ಕಳವು

0

ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಕಳ್ಳನೊಬ್ಬ ಅಂಗಡಿಯೊಂದರಿಂದ ಹಂಚು ಎಗರಿಸಿ ಪರಾರಿಯಾಗಿರುವ ಘಟನೆ ಕಲ್ಲುಗುಂಡಿಯಿಂದ ವರದಿಯಾಗಿದೆ.

ಮಲ್ಲಿಕಾ ಟ್ರೇಡರ್ಸ್ ಮಾಲೀಕ ಗಂಗಾಧರ ಎಸ್‌ ಡಿ ಅವರ ಅಂಗಡಿಯಲ್ಲಿ ಇಂದು ಬೆಳಗ್ಗೆ ಹಂಚು ಕಳ್ಳತನ ಆಗಿದ್ದು. ಎಂದಿನಂತೆ ಅಂಗಡಿ ಮಾಲೀಕರು ಬೆಳಗ್ಗೆ ಬಂದು ಹಂಚು ದಾಸ್ತಾನು ಇಟ್ಟ ಜಾಗದಲ್ಲಿ ಪರಿಶೀಲಿಸಿದಾಗ ಹಂಚುಗಳು ಕಡಿಮೆ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ KA 19 28363 ಓಮಿನಿ ಕಾರಿನಲ್ಲಿ ಬಂದ ವ್ಯಕ್ತಿ ಹಂಚು ಕದಿಯುತ್ತಿರುವ ದೃಶ್ಯ ಸೆರೆಯಾಗಿದೆ. ತಕ್ಷಣ ಅಂಗಡಿ ಮಾಲೀಕರು ಪರಿಶೀಲಿಸಿದಾಗ ಅದರಲ್ಲಿ ಉಮೇಶ್ ಎಂಬುವರ ಹೆಸರು ಕಂಡು ಬಂತು.

ಕೂಡಲೇ ಆರ್‌ಟಿಒ ಆಫೀಸ್‌ನಿಂದ ವಾಹನ ಮಾಲೀಕನ ನಂಬರ್ ಪಡೆದು ಕರೆ ಮಾಡಿ ಅವರಿಗೆ ವಿಚಾರಿಸಿದಾಗ ಅವರು ನಾನು ತೆಗೆದುಕೊಂಡು ಹೋಗಿಲ್ಲವೆಂದು ಹೇಳಿದ್ದರು. ಕೂಡಲೇ ಅವರಿಗೆ ಬರುವಂತೆ ತಿಳಿಸಲಾಯಿತು. ಸಂಜೆಯ ವೇಳೆಗೆ ಓರ್ವ ವ್ಯಕ್ತಿಯು ಬಂದು ಉಮೇಶ್ ರವರು ನಿಮಗೆ ಹಣ ಕೊಡಲು ತಿಳಿಸಿದ್ದಾರೆ ಎಂದಾಗ, ಅಂಗಡಿ ಮಾಲಕರು ನೀವು ಹಣ ಕೊಡುವುದು ಬೇಡ, ಅವರೇ ಬರಲಿ ಎಂದು ತಿಳಿಸಿದರು. ನಂತರ ಪೊಲೀಸ್ ಠಾಣೆಗೆ ವಿಷಯ ತಿಳಿಸಲಾಯಿತು.