ಅಂಬಟಡ್ಕ : ಏಕಾಏಕಿ ರಸ್ತೆಗೆ ನುಗ್ಗಿದ ದನಕ್ಕೆ ಕಾರುಡಿಕ್ಕಿ- ದನ ಸಾವು

0

ಅಂಬಟಡ್ಕ ವಿವೇಕಾನಂದ ಸರ್ಕಲ್ ಬಳಿ ಚಲಿಸುತ್ತಿದ್ದ ಕಾರು ಏಕಾಏಕಿ ರಸ್ತೆಗೆ ನುಗ್ಗಿದ ದನಕ್ಕೆ ಡಿಕ್ಕಿಯಾಗಿ ದನ ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ.

ಮೃತಪಟ್ಟ ದನವನ್ನು ಸುಳ್ಯ ನಗರ ಪಂಚಾಯತಿ ಸಿಬ್ಬಂದಿಗಳು ಮತ್ತು ಬಜರಂಗದಳದ ಕಾರ್ಯಕರ್ತರು ಸೇರಿ ದಫನ ಕಾರ್ಯವನ್ನು ನೆರವೇರಿಸಿದರು ಎನ್ನಲಾಗಿದೆ.

ಪೈಚಾರು ಮೂಲದ ವಿದ್ಯಾರ್ಥಿಯೊಬ್ಬ ಚಲಾಯಿಸುತ್ತಿದ್ದ ಕಾರಿಗೆ ದನ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿತ್ತು. ಈ ಸಂದರ್ಭದಲ್ಲಿ ಇದೇ ರಸ್ತೆಯಲ್ಲಿ ಬರುತ್ತಿದ್ದ ಪಶು ವೈದ್ಯಾಧಿಕಾರಿ ಕೂಡಲೇ ತಮ್ಮ ವಾಹನವನ್ನು ನಿಲ್ಲಿಸಿ ದನಕ್ಕೆ ಚಿಕಿತ್ಸೆ ಕೊಡಲು ಪ್ರಯತ್ನಿಸಿದರು ಫಲಕಾರಿಯಾಗದೆ ಅದು ಸ್ಥಳದಲ್ಲಿಯೇ ಮೃತಪಟ್ಟಿದೆ ಎನ್ನಲಾಗಿದೆ.

ಬಳಿಕ ಘಟನೆಯ ವಿವರ ತಿಳಿದ ನಗರ ಪಂಚಾಯತ್ ಸಿಬ್ಬಂದಿಗಳು ಮತ್ತು ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಶಾಸ್ತ್ರೋತ್ತವಾಗಿ ದಫನ ಕಾರ್ಯ ಮಾಡಿದರು ಎಂದು ತಿಳಿದುಬಂದಿದೆ.