ಪೆರಾಜೆ ಹಾಲು ಉತ್ಪಾದಕ ಸಹಕಾರಿ ಸಂಘದಿಂದ ಅಗಲಿದ ಕೇಶವ ಕೊಳಂಗಾಯ ಅವರಿಗೆ ನುಡಿನಮನ ಸಲ್ಲಿಕೆ

0

ಪೆರಾಜೆ ಹಾಲು ಉತ್ಪಾದಕ ಸಹಕಾರಿ ಸಂಘದ ನಿರ್ದೇಶಕರಾಗಿದ್ದ ಕೇಶವ ಕೊಳಂಗಾಯ ಅವರು ಜೂ.12ರಂದು ನಿಧನರಾಗಿದ್ದು, ಅವರಿಗೆ ನುಡಿನಮನ ಕಾರ್ಯಕ್ರಮವು ಸಂಘದ ಕಛೇರಿಯಲ್ಲಿ ಜೂ.13ರಂದು ಬೆಳಿಗ್ಗೆ ನಡೆಯಿತು.


ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಹೊನ್ನಪ್ಪ ಗೌಡ ಕೊಳಂಗಾಯ ಅವರು ಪೆರಾಜೆ ಹಾಲು ಉತ್ಪಾದಕ ಸಹಕಾರಿ ಸಂಘದ ನಿರ್ದೇಶಕರಾಗಿ ಕೇಶವ ಕೊಳಂಗಾಯ ಅವರು ಸಲ್ಲಿಸಿದ ಸೇವೆಯ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಹಾಲು ಉತ್ಪಾದಕ ಸಹಕಾರಿ ಸಂಘದ ಉಪಾಧ್ಯಕ್ಷರು, ನಿರ್ದೇಶಕರುಗಳು, ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.