ಲಯನ್ಸ್ ಕ್ಲಬ್ ವಲಯಾಧ್ಯಕ್ಷರಾಗಿ ಸಂತೋಷ್ ಜಾಕೆ

0

ಪಂಜ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸಂತೋಷ್ ಜಾಕೆಯವರು ಲಯನ್ಸ್ ಕ್ಲಬ್ ನ ವಲಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಇದರ ಡಿಸ್ಟ್ರಿಕ್ಟ್ 317 ರೀಜನ್ 7, ಜೋನ್ 1 ರ ಅಧ್ಯಕ್ಷರಾಗಿ ಇವರ ಆಯ್ಕೆ ಮಾಡಲಾಗಿದೆ.

ಸುಳ್ಯ, ಬೆಳ್ಳಾರೆ, ಪಂಜ, ಕಡಬ ಲಯನ್ಸ್ ಕ್ಲಬ್ ಗಳು ಇವರ ವ್ಯಾಪ್ತಿಗೆ ಸೇರಿದೆ.

ಸಂತೋಷ್ ಜಾಕೆಯವರು ಕಲ್ಮಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿ, ಎಪಿಎಂಸಿ ಮಾಜಿ ಉಪಾಧ್ಯಕ್ಷರಾಗಿ, ಪಂಜ ಪಂಚಶ್ರೀ ಜೇಸಿಯ ಮಾಜಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿ, ಪ್ರಣವ ಸಹಕಾರಿ ಸಂಘ ಸುಳ್ಯ ಹಾಗೂ ಸುದ್ದಿ ಸೌಹಾರ್ದ ಸಹಕಾರಿ ಸಂಘ ಸುಳ್ಯ ಶಾಖೆಯ ಸಲಹಾ ಸಮಿತಿ ಸದಸ್ಯರಾಗಿದ್ದಾರೆ.