ನಾಳೆ (ಜು.3): ಸುಳ್ಯದಲ್ಲಿ ಸೋಲಾರ್ ಎನರ್ಜಿ ವಿವಿಧ ಆವಿಷ್ಕಾರಗಳ ಬಗ್ಗೆ ಮಾಹಿತಿ ಕಾರ್ಯಗಾರ

0

ಸೋಲಾರ್ ಎನರ್ಜಿಯ ವಿವಿಧ ಉಪಯುಕ್ತ ಸಿಸ್ಟಮ್‌ಗಳ ಬಗ್ಗೆ ತಜ್ಞ ಎಂದು ಪರಿಗಣಿಸಲ್ಪಟ್ಟಿರುವ ಉಮೇಶ್ ರೈ ಕೈಕಾರ ಇವರಿಂದ ಜು.3ರಂದು ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ 2 ಗಂಟೆಗೆ ಮಾಹಿತಿ ಕಾರ್ಯಾಗಾರ ನಡೆಯಲಿದೆ.

ವಿವಿಧ ಸೋಲಾರ್ ಲೈಟ್, ಸೋಲಾರ್ ಹೀಟರ್, ಸೋಲಾರ್ ಪಂಪ್‌ಸೆಟ್, ಸೋಲಾರ್ ಆಫ್‌ಗ್ರಿಡ್, ಸೋಲಾರ್ ಆನ್‌ಗ್ರಿಡ್, ಹೈಬ್ರೀಡ್ ಇನ್ವರ್ಟರ್‌ಗಳ ಖರ್ಚು ವೆಚ್ಚ, ಪ್ರಯೋಜನಗಳ ಬಗ್ಗೆ ತಿಳಿಸಲಿದ್ದಾರೆ.

ಹಾಗೂ ಸೋಲಾರ್ ಆಫ್‌ಗ್ರಿಡ್ ಉಪಕರಣಗಳು ಮತ್ತು ವ್ಯವಸ್ಥೆ ಬಗ್ಗೆ , ಸೋಲಾರ್ ಆನ್‌ಗ್ರಿಡ್ ಉಪಕರಣಗಳ ಮತ್ತು ವ್ಯವಸ್ಥೆ, ಕಂಗೆನ್ ವಾಟರ್ ಬಗ್ಗೆ ಮಾಹಿತಿ ನೀಡಲಿದ್ದಾರೆ. ಆಸಕ್ತರು ಭಾಗವಹಿಸಬಹುದೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.