ರೋಟರಿ ಕ್ಲಬ್ ಸುಳ್ಯ ಸಿಟಿ ಪದಗ್ರಹಣ ಸಮಾರಂಭ

0

ಗಿರೀಶ್ ‌ನಾರ್ಕೋಡು ತಂಡದಿಂದ ಅಧಿಕಾರ ಸ್ವೀಕಾರ

ಡಾ.ಶಂಕರ್ ಭಟ್, ಲೋಕೇಶ್ ಊರುಬೈಲು ರಿಗೆ ಸನ್ಮಾನ

ರೋಟರಿ ಕ್ಲಬ್ ಸುಳ್ಯ‌ ಸಿಟಿ ಇದರ ನೂತನ ಅಧ್ಯಕ್ಷ ಗಿರೀಶ್ ನಾರ್ಕೋಡು, ಕಾರ್ಯದರ್ಶಿ ಚೇತನ್ ಪಿ.ಎನ್. ಕೋಶಾಧಿಕಾರಿ ಹೇಮಂತ್ ಕಾಮತ್ ಇವರ ನೇತೃತ್ವದ ತಂಡದ ಪದಗ್ರಹಣ ಸಮಾರಂಭವು ಜು.13 ರಂದು ಸುಳ್ಯ ರಥಬೀದಿಯಲ್ಲಿರುವ ರೋಟರಿ ಸಮುದಾಯದ ಭವನದಲ್ಲಿ ನಡೆಯಿತು.

ಸಮಾರಂಭವು ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಪಿ.ಮುರಳೀಧರ್ ರೈಯವರ ಅಧ್ಯಕ್ಷತೆಯಲ್ಲಿ ‌ಆರಂಭಗೊಂಡಿತು. ನೂತನ ತಂಡಕ್ಕೆ ಸುಳ್ಯ ರೋಟರಿ ‌ಕ್ಲಬ್ ಅಧ್ಯಕ್ಷ ಆನಂದ ಖಂಡಿಗ ಪದಗ್ರಹಣ ನೆರವೇರಿಸಿದರು. ಪದಗ್ರಹಣದ ನಂತರ ನೂತನ ಅಧ್ಯಕ್ಷ ಗಿರೀಶ್ ನಾರ್ಕೋಡು ರವರ ಅಧ್ಯಕ್ಷತೆಯಲ್ಲಿ ಸಭೆ ಮುಂದುವರಿಯಿತು.

ಮುಖ್ಯ ಅತಿಥಿಗಳಾಗಿ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರೊ.ರಾಜೇಂದ್ರ ಕಲ್ಬಾವಿ ಆಗಮಿಸಿದ್ದರು. ವಲಯ 5 ರ ಅಸಿಸ್ಟೆಂಟ್ ಗವರ್ನರ್ ರೊ.ನರಸಿಂಹ ಪೈ, ವಲಯ 5 ರ ಝೋನಲ್ ಲೆಫ್ಟಿನೆಂಟ್ ರೊ.ಸುಜಿತ್ ಪಿ.ಕೆ., ಗವರ್ನರ್ ವಿಶೇಷ ಪ್ರತಿನಿಧಿ ರೊ.ಕೇಶವ ಪಿ.ಕೆ., ಐಪಿಪಿ‌ ಪ್ರೀತಮ್ ಡಿ.ಕೆ., ಶ್ರೀಮತಿ ಮೀರಾ ಮುರಳೀಧರ್, ಶ್ರೀಮತಿ ಸವಿತಾ ನಾರ್ಕೋಡು ವೇದಿಕೆಯಲ್ಲಿದ್ದರು.

ಸನ್ಮಾನ : ಸಮಾರಂಭದಲ್ಲಿ ಸುಳ್ಯದ ಹಿರಿಯ ವೈದ್ಯರಾದ ಶಂಕರ್ ಭಟ್ ಹಾಗೂ ರಂಗಮಯೂರಿ ನಿರ್ದೇಶಕ ಲೋಕೇಶ್ ಊರುಬೈಲುರನ್ನು ಗೌರವಿಸಲಾಯಿತು.


ರೊ.ಶಿವರಾಮ ಏನೆಕಲ್ ಹಾಗೂ ಪ್ರೀತಮ್ ಡಿ.ಕೆ., ಮುರಳೀಧರ್ ರೈ, ಶಿವಪ್ರಸಾದ್ ಕೆ.ವಿ. ಯವರನ್ನು ಗೌರವಿಸಲಾಯಿತು.

ಕ್ಲಬ್ ಬುಲೆಟಿನ್ ಯುಕ್ತಿಯನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು. ರೊ.ಭಾನುಪ್ರಕಾಶ್ ಕಾರ್ಯ ನಡೆಸಿಕೊಟ್ಟರು.

ಆಲೆಟ್ಟಿ ಶಾಲೆಯಲ್ಲಿ ಎಲ್.ಕೆ.ಜಿ., ಯು.ಕೆ.ಜಿ ಆರಂಭವಾಗಿದ್ದು ಅದರ ಒಂದು‌ ವರ್ಷದ ವೆಚ್ಚವನ್ನು ಕ್ಲಬ್ ನಿಂದ ನೀಡಲಾಗುತ್ತಿದ್ದು, ರೂ.1‌ಲಕ್ಷದ ಚೆಕ್ ನ್ನು ಸಮಾರಂಭದಲ್ಲಿ ನೀಡಲಾಗಿಯಿತು. ಶಾಲಾ ಶಿಕ್ಷಕರಿಗೆ ಕ್ಲಬ್ ಮಾಜಿ ಅಧ್ಯಕ್ಷ ತೀರ್ಥರಾಮ ಕುಂಚಡ್ಕ ಚೆಕ್ ‌ವಿತರಿಸಿದರು.
ನಾಗಪಟ್ಟಣ ಶಾಲೆಗೆ ಚಯರ್, ಟೇಬಲ್, ಸೂರ್ತಿಲ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ಮನೀಷ್, ರಶ್ಮಿತಾ, ಶ್ರಾವ್ಯ ಎಂ.ಪಿ.‌ಯವರನ್ನು ಗೌರವಿಸಲಾಯಿತು. ‌ರಂಜಿತ್ ಎನ್.ಆರ್.‌ ವಿದ್ಯಾರ್ಥಿಗಳನ್ನು ಪರಿಚಯಿಸಿದರು.

ಮೌರ್ಯ ನಾರ್ಕೋಡು ಪ್ರಾರ್ಥಿಸಿದರು. ಅಧ್ಯಕ್ಷ ಮುರಳೀಧರ್ ರೈ ಸ್ವಾಗತಿಸಿದರು. ಕಾರ್ಯದರ್ಶಿ ಶಿವಪ್ರಸಾದ್ ಕೆ.ವಿ. ವರದಿ ವಾಚಿಸಿದರು. ಡಾ.ಅಮಿತ್, ಪ್ರಮೋದ್ ಕೆ, ಮಧುಕಿರಣ್, ಶ್ಯಾಮ್ ಭಟ್, ನೇಮಿರಾಜ್, ಅತಿಥಿಗಳನ್ನು‌ ಪರಿಚಯಿಸಿದರು. ಗುರುವಿಕ್ರಮ್ ಕಾರ್ಯಕ್ರಮ ನಿರೂಪಿಸಿದರು.

ನೂತನ ಕಾರ್ಯದರ್ಶಿ ಚೇತನ್ ಪಿ.ವಿ. ವಂದಿಸಿದರು.