ಕುದ್ರೆಪಾಯದಲ್ಲಿ ಉಸ್ಮಾನ್ ಕೊಲೆ

0


ಕೇರಳದಲ್ಲಿ ಆರೋಪಿಗಳ ಬಂಧನ


ಚೆಂಬು ಗ್ರಾಮದ ಕುದ್ರೆಪಾಯ ಎಂಬಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ಸಹೋದರರಿಂದ ಕೊಲೆಯಾದ ಉಸ್ಮಾನ್ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿಗಳನ್ನು ಕೇರಳದಲ್ಲಿ ಪತ್ತೆ ಹಚ್ಚಿ ಪೊಲೀಸರು ಹಿಡಿದಿದ್ದಾರೆಂದು ತಿಳಿದುಬಂದಿದೆ. ಉಸ್ಮಾನ್‌ರ ಸಹೋದರರಾದ ರಫೀಕ್ ಮತ್ತುಸತ್ತಾರ್ ಆಸ್ತಿ ವಿವಾದಕ್ಕೆ ಸಂಬಂಧಿಸಿ ಅಣ್ಣ ಉಸ್ಮಾನ್‌ರನ್ನು ಚೂರಿಯಿಂದ ಇರಿದು ಜು. 14ರಂದು ಕೊಲೆ ಮಾಡಿದ್ದರು.

ಬಳಿಕ ಅವರು ರಿಕ್ಷಾದಲ್ಲಿ ಅರಂತೋಡುವರೆಗೆ ಬಂದು ಮತ್ತೊಂದು ರಿಕ್ಷಾದಲ್ಲಿ ಸುಳ್ಯಕ್ಕೆ ಬಂದು ಕೇರಳ ಕಡೆಗೆ ಪರಾರಿಯಾಗಿದ್ದರು.
ಅವರನ್ನು ಕೊಡಗು ಪೊಲೀಸರು ನಿನ್ನೆ ರಾತ್ರಿ ಕೇರಳದಲ್ಲಿ ಬಂಧಿಸಿದ್ದಾರೆ.